ಮದ್ಯಪ್ರಿಯರ ವೀಕೆಂಡ್ ಮಸ್ತಿಗೆ ಬ್ರೇಕ್
ಬೆಂಗಳೂರು : ರಾಜ್ಯಾದ್ಯಂತ ಇಂದು ರಾತ್ರಿ ೮ರಿಂದಲೇ ವೀಕೆಂಡ್ ಕರ್ಫ್ಯೂ ಆರಂಭವಾಗ್ತಿದೆ. ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಸೇವೆಗಳಿಗೂ ಸರ್ಕಾರ ಕಡಿವಾಣ ಹಾಕುತ್ತಿದೆ. ಮದ್ಯಪ್ರಿಯರಿಗೆ ಇದರಿಂದ ಶಾಕ್ ಉಂಟಾಗಿದೆ. ಇಂದು ರಾತ್ರಿ ೮ರಿಂದ ಸೋಮವಾರವರೆಗೂ ಮದ್ಯದಂಗಡಿಗಳು ಕೂಡ ಬಂದ್ ಆಗಿರಲಿವೆ.
ಇಂದು ರಾತ್ರಿ ೮ರಿಂದಲೇ ಮದ್ಯ ಮಾರಾಟ ಕೂಡ ಬಂದ್ ಆಗಲಿದೆ ಎಂದು ಸರ್ಕಾರ ತಿಳಿಸಿದೆ. ಅಕ್ರಮವಾಗಿ, ಕದ್ದು ಮುಚ್ಚಿ ವ್ಯಾಪಾರ ಮಾಡಿದವರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಅಬಕಾರಿ ಇಲಾಖೆ ಸಜ್ಜಾಗಿದೆ. ಸಂಪೂರ್ಣವಾಗಿ ಬಾಗಿಲು ಹಾಕಬೇಕು. ಒಂದು ವೇಳೆ ಮದ್ಯ ಮಾರಾಟ ಮಾಡಿ ಸಿಕ್ಕಿ ಬಿದ್ದರೆ ಅವರ ಬಾರ್ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗುವುದು ಎಂದು ಸರ್ಕಾರ ಖಡಕ್ ಸೂಚನೆ ನೀಡಿದೆ.
ಸೋಮವಾರ ಮುಂಜಾನೆವರೆಗೂ ಈ ನಿಯಮ ಚಾಲ್ತಿಯಲ್ಲಿರುತ್ತದೆ. ಪಬ್ , ಬಾರ್ ಸೇರಿದಂತೆ ರೆಸ್ಟೋರೆಂಟ್ಗಳು ಕೂಡ ಬಂದ್ ಇರಲಿವೆ. ಸೋಮವಾರದ ಬಳಿಕವೂ ಕೆಲವು ನಿಯಮ ಪಾಲನೆಯೊಂದಿಗೆ ಮಾತ್ರ ಮದ್ಯ ಸೇವಿಸಲು ಅವಕಾಶ ನೀಡಿದೆ. ವ್ಯಾಕ್ಸಿನೇಟೆಡ್ ಸರ್ಟಿಫಿಕೇಟ್ ತೋರಿಸಿದರೆ ಮಾತ್ರ ಮದ್ಯ ಸೇವಿಸಲು ಅವಕಾಶ ಎಂದು ಸರ್ಕಾರ ತಿಳಿಸಿದೆ. ಸೋಷಿಯಲ್ ಡಿಸ್ಟೆನ್ಸಿಂಗ್ ಮೇಂಟೈನ್ ಮಾಡುವಂತೆಯೂ ಸರ್ಕಾರ ಸೂಚಿಸಿದೆ.
ನಿಯಮಗಳ ಉಲ್ಲಂಘನೆ ಕಂಡು ಬಂದ್ರೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಸರ್ಕಾರ ಸೂಚಿಸಿದೆ.