ಕೃಷಿ ಯಂತ್ರೋಪಕರಣ ಖರೀದಿಯಲ್ಲಿ ಗೋಲ್‌ಮಾಲ್; ಕಾಂಗ್ರೆಸ್ ಆರೋಪ
ಬೆಂಗಳೂರು; ಕೃಷಿ ಯಂತ್ರೋಪಕರಣ ಖರೀದಿಯಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಗೋಲ್‌ಮಾಲ್ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಲಾಗಿದ್ದು, 230 ಕೋಟಿ ರೂಪಾಯಿ ದೋಖಾ ಮಾಡದಲಾಗಿದೆ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ ಟ್ವೀಟ್‌ನಲ್ಲಿ ಏನಿದೆ..?
ರೈತರ ಪರ ಅನ್ನುವ ಈ ಬಿಜೆಪಿ ಸರ್ಕಾರ ಅನ್ನದಾತರ ಬೆನ್ನಿಗೆ ಬರೆ ಎಳೆಯುತ್ತಲೇ ಇದೆ. ರೈತರಿಗೆ ನೀಡುವ ಯಂತ್ರೋಪಕರಣ ಖರೀದಿಯಲ್ಲೂ ಕೋಟ್ಯಂತರ ರೂಪಾಯಿಗಳ ಗೋಲ್ ಮಾಲ್ ಎಸಗಿದೆ. ಕೃಷಿ ಸಚಿವರ ರೈತ ಪರ ಕಾಳಜಿ ಕೇವಲ ಸಿನಿಮಾದಲ್ಲಷ್ಟೇ ಅನ್ನುವುದು ಸಾಬೀತಾಗಿದೆ. #Scamಸರ್ಕಾರ