Uncategorized

ನೆದರ್ಲೆಂಡ್‌ನಲ್ಲಿ ಹೈದರಾಬಾದ್‌ ವ್ಯಕ್ತಿ ಸಾವು..!

ಹೈದರಾಬಾದ್‌:  ನೆದರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದ ಹೈದರಾಬಾದ್‌ನ ವ್ಯಕ್ತಿಯೊಬ್ಬ ಬೆಂಕಿ ದುರಂತದಲ್ಲಿ ಸಾವಿಗೀಡಾಗಿದ್ದಾನೆ. 43 ವರ್ಷದ ಅಬ್ದುಲ್‌ ಹಾದಿ ಮೃತಪಟ್ಟ ದುರ್ದೈವಿ. ಅಬ್ದುಲ್‌ ಹಾದಿ ಹೈದರಾಬಾದ್‌ನ ಆಸಿಫ್‌ ನಗರದ ಮೂಲ ನಿವಾಸಿ. ಕೆಲಸಕ್ಕಾಗಿ 2015ರಲ್ಲಿ ನೆದರ್ಲೆಂಡ್‌ಗೆ ಹೋಗಿದ್ದರು. ಅಬ್ದುಲ್ ಹಾದಿ ಮಾಡುತ್ತಿದ್ದ ಕಟ್ಟಡದಲ್ಲಿ ಎರಡು ದಿನದ ಹಿಂದೆ ಬೆಂಕಿ ದುರಂತ ಸಂಭವಿಸಿತ್ತು. ಇದರಿಂದಾಗಿ ಕಟ್ಟಡ ತುಂಬಾ ಹೊಗೆ ಆವರಿಸಿತ್ತು. ಇದ್ರಿಂದಾಗಿ ಅಬ್ದುಲ್‌  ಹಾದಿ‌ ಅವರು ಉಸಿರುಗಟ್ಟಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಅವರನ್ನು ಹೆಚ್‌ಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಬ್ದುಲ್‌, 24 ಗಂಟೆ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಅಬ್ದುಲ್‌ ಹಾದಿ ಅವರ ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಅಬ್ದುಲ್‌ ಸಂಬಂಧಿಕರು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮೃತದೇಹವನ್ನು ಭಾರತಕ್ಕೆ ತರಲು ವ್ಯವಸ್ಥೆ ಮಾಡಿಕೊಡುವಂತೆ ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದಾರೆ.

Share Post