BengaluruCrime

ಜಲಮಂಡಳಿಗೆ ವಂಚಿಸಿದ 13 ಅಧಿಕಾರಿ, ಸಿಬ್ಬಂದಿ ಅಮಾನತು

ಬೆಂಗಳೂರು: ನೀರು ಪೂರೈಕೆ ಶುಲ್ಕ ವಸೂಲಿ ಮಾಡಿ ಜಲಮಂಡಳಿ ಬ್ಯಾಾಂಕ್ ಖಾತೆಗೆ ಪಾವತಿಸದೆ ವಂಚಿಸುತ್ತಿದ್ದ ಪ್ರಕರಣಕ್ಕೆೆ ಸಂಬಂಧಿಸಿದಂತೆ ಮಂಡಳಿಯ 13 ಅಧಿಕಾರಿ, ಸಿಬ್ಬಂದಿಯನ್ನು ಅಮಾನತುಗೊಳಿಸಿ ಜಲಮಂಡಳಿ ಅಧ್ಯಕ್ಷ ಜಯರಾಂ ಆದೇಶಿಸಿದ್ದಾರೆ.

ಕಳೆದ 2016ರಿಂದ 2018ರವರೆಗೆ ಜಲಮಂಡಳಿಯಿಂದ ನೀರು ಪೂರೈಕೆಗೆ ಸಂಬಂಧಿಸಿದಂತೆ ವಸೂಲಿ ಮಾಡಲಾಗುತ್ತಿದ್ದ ಶುಲ್ಕವನ್ನು ನಗದು ಅಥವಾ ಡಿಡಿ, ಚೆಕ್ ಮೂಲಕ ವಸೂಲಿ ಮಾಡಲಾಗುತ್ತಿತ್ತು. ಹೀಗೆ ವಸೂಲಿ ಮಾಡುವ ಮೊತ್ತವನ್ನು ಜಲಮಂಡಳಿಯ ನಗದು ಪುಸ್ತಕದಲ್ಲಿ ನೊಂದಾಯಿಸುವುದರ ಜತೆಗೆ ಸಜಲ ತಂತ್ರಾಂಶದಲ್ಲಿ ಗ್ರಾಹಕರ ಖಾತೆಯಲ್ಲಿ ಅದನ್ನು ನಮೂದಿಸಬೇಕಿತ್ತು. ಜತೆಗೆ ಹಣವನ್ನು ಜಲಮಂಡಳಿ ಬ್ಯಾಾಂಕ್ ಖಾತೆಗೆ ಪಾವತಿಸಬೇಕಿತ್ತು. ಆದರೆ, 2016ರಿಂದ 2018ರವರೆಗೆ 850ಕ್ಕೂ ಹೆಚ್ಚಿಿನ ಗ್ರಾಾಹಕರಿಂದ ವಸೂಲಿಯಾದ ನೀರಿನ ಶುಲ್ಕವನ್ನು ಜಲಮಂಡಳಿ ಬ್ಯಾಾಂಕ್ ಖಾತೆಗೆ ಪಾವತಿಸದೆ, ಸಜಲ ತಂತ್ರಾಾಂಶದಲ್ಲಿ ಗ್ರಾಾಹಕರ ಖಾತೆಯಲ್ಲಿ ಹಣ ಪಾವತಿಸಲಾಗಿದೆ ಎಂದು ನಮೂದಿಸಿ ವಂಚಿಸಿರುವುದು ಕಳೆದ ತಿಂಗಳು ಬೆಳಕಿಗೆ ಬಂದಿತ್ತು.

ಈ ಪ್ರಕರಣಕ್ಕೆೆ ಸಂಬಂಧಿಸಿದಂತೆ ಜಲಮಂಡಳಿಯು ಸಹಾಯಕ ನಿಯಂತ್ರಕರು (ಲೆಕ್ಕ) ಅವರ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಿ ಆಡಿಟ್ ಮಾಡಲಾಗಿತ್ತು. ಈ ಆಡಿಟ್‌ಗೆ ಸಂಬಂಧಿಸಿದಂತೆ ಇದೀಗ ಮಧ್ಯಂತರ ವರದಿ ಬಂದಿದ್ದು, ಅಂದಾಜು 1.75 ಕೋಟಿ ರೂ.ಗೂ ಹೆಚ್ಚಿಿನ ಮೊತ್ತದ ಬಿಲ್ ಮೊತ್ತ ವಸೂಲಿಯಾಗಿದ್ದು, ಅದನ್ನು ಜಲಮಂಡಳಿ ಬ್ಯಾಾಂಕ್ ಖಾತೆಗೆ ಪಾವತಿಸಲಾಗಿಲ್ಲ ಎಂಬುದು ತಿಳಿದುಬಂದಿದೆ. ಜತೆಗೆ ಮಂಡಳಿಯ ಎಂಜಿನಿಯರ್‌ಗಳು ಸೇರಿ ಅಧಿಕಾರಿಗಳು ಮಾತ್ರ ಬಳಸುತ್ತಿಿದ್ದ ಸಜಲ ತಂತ್ರಾಾಂಶದ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ನ್ನು ಗುತ್ತಿಿಗೆ ನೌಕರರು ದುರ್ಬಳಕೆ ಮಾಡಿಕೊಂಡು ಮಂಡಳಿಗೆ ವಂಚಿಸಲಾಗಿದೆ ಎಂದೂ ಉಲ್ಲೇಖಿಸಲಾಗಿದೆ.

ಸಹಾಯಕ ನಿಯಂತ್ರಕರು (ಲೆಕ್ಕ) ಅವರ ನೇತೃತ್ವದ ತಂಡಗಳು ನೀಡಿದ ಮಧ್ಯಂತರ ವರದಿಯನ್ನಾಾಧರಿಸಿ ಜಲಮಂಡಳಿ ಅಧ್ಯಕ್ಷ ಜಯರಾಂ ಅವರು, 13 ಜನ ಗುತ್ತಿಿಗೆ ನೌಕರರು ಸೇರಿ ಅಧಿಕಾರಿಗಳನ್ನು ಅಮಾನತು ಮಾಡಿದ್ದಾಾರೆ. ಈ ಕುರಿತು ಪ್ರತಿಕ್ರಿಿಯಿಸಿರುವ ಜಯರಾಂ, ನೀರಿನ ಬಿಲ್ ವಸೂಲಿ ಮಾಡಿ ಮಂಡಳಿ ಬ್ಯಾಾಂಕ್ ಖಾತೆಗೆ ಪಾವತಿಸದೇ ವಂಚಿಸಿದ ಪ್ರಕರಣಕ್ಕೆೆ ಸಂಬಂಧಿಸಿದಂತೆ ಆಂತರಿಕ ಆಡಿಟ್‌ನ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಅದರ ಆಧಾರದಲ್ಲಿ 13 ಜನರನ್ನು ಅಮಾನತು ಮಾಡಲಾಗಿದೆ. ಪೂರ್ಣ ಪ್ರಮಾಣದ ವರದಿ ಬಂದ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾಾರೆ.

Share Post