ಹೊಸ ವರ್ಷ ಹಿನ್ನೆಲೆ: ಸಂಜೆ ೬ ಗಂಟೆಯಿಂದಲೇ ಎಂಜಿ ರೋಡ್, ಬ್ರಿಗೇಡ್ ರೋಡ್ ಬಂದ್
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾಗೂ ಒಮಿಕ್ರಾನ್ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಿದೆ. ಮಂಗಳವಾರದಿಂದ ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೫ ಗಂಟೆವರೆಗೆ ನಿಷೇಧಾಜ್ಞೆ ವಿಧಿಸಿದೆ. ಈ ವೇಳೆ ಯಾರು ಅನಗತ್ಯವಾಗಿ ಯಾರು ಓಡಾಡುವಂತಿಲ್ಲ. ತುರ್ತು ಸೇವೆ ಹೊರತು ಪಡಿಸಿ ಬೇರೆ ಯಾರು ನಗರದಲ್ಲಿ ಓಡಾಡುವಾಗಿಲ್ಲ. ಒಂದು ವೇಳೆ ಓಡಾಡಿದರೆ ಕಂಡರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶ ಹೊರಡಿಸಿದೆ. ಹೀಗಾಗಿ ನ್ಯೂ ಇಯರ್ ಆಚರಿಸದಂತೆ ಕೂಡ ಜನರಿಗೆ ಬ್ರೇಕ್ ಹಾಕಿದ್ದಾರೆ. ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೊಸ ವರ್ಷ ಬರ ಮಾಡಿಕೊಳ್ಳವುದುಕ್ಕೆ ಸಿಲಿಕಾನ್ ಸಿಟಿ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಕೊರೋನಾ ಹಾಗೂ ಒಮಿಕ್ರಾನ್ ಹೆಚ್ಚಳದ ಭೀತಿಯಿಂದ ಬೆಂಗಳೂರಿನಲ್ಲಿ ಆಚರಣೆಗೆ ಕಡಿವಾಣ ಹಾಕಿದ್ದಾರೆ. ಇದ್ದರಿಂದ ಜನರು ರೆಸಾರ್ಟ್ ಮತ್ತು ಬೀಚ್ ಇರುವಂತಹ ಪ್ರದೇಶಗಳಿಗೆ ಮುಖಮಾಡಿದ್ದಾರೆ.
ಇನ್ನು ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದ್ದರಿಂದ ಇಂದು ಸಂಜೆ ಆರು ಗಂಟೆಯಿಂದಲೇ ನಗರದ ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್ ಗಳನ್ನು ಬಂದ್ ಮಾಡಲಾಗಿದೆ. ಆ ರಸ್ತೆಯ ಸುತ್ತಮುತ್ತ ಬ್ಯಾರಿಕೇಡ್ ಹಾಕಿದ್ದಾರೆ.
ಕಳೆದ ಎರಡು ವರ್ಷದ ಹಿಂದೆ ಹೊಸ ವರ್ಷ ಬಂದರೆ ಸಾಕು ಬೆಂಗಳೂರಿನಲ್ಲಿ ಹಬ್ಬದ ವಾತವಾರಣ ಸೃಷ್ಟಿಯಾಗುತ್ತಿತ್ತು. ಎಲ್ಲ ಕಡೆ ದೀಪಾಲಂಕಾರದಿಂದ ಝಗಮಗಿಸುತ್ತಿತ್ತು. ಅಷ್ಟೇ ಅಲ್ಲದೆ ಸಾವಿರಾರೂ ಮಂದಿ ಬಂದು ಕುಣಿದು ಕುಪ್ಪಳಿಸಿ ಎಂಜಾಯ್ ಮಾಡುತ್ತಿದ್ದರು. ಆದರೆ ಇದೀಗ ಕೊರೋನಾದಿಂದ ಎಲ್ಲದ್ದಕ್ಕೂ ಬ್ರೇಕ್ ಹಾಕಿದ್ದಾರೆ.