ಪಾಕಿಸ್ತಾನದ ಕ್ವೆಟ್ಟಾ ನಗರದಲ್ಲಿ ಬಾಂಬ್ ಸ್ಫೋಟ; ನಾಲ್ವರ ದುರ್ಮರಣ..!
ಕ್ವೆಟ್ಟಾ: ಪಾಕಿಸ್ತಾನದಲ್ಲಿ ಬಾಂಬ್ ದಾಳಿಗಳಿಗೇನೂ ಬರ ಇರೋದಿಲ್ಲ. ಪ್ರತಿ ತಿಂಗಳೂ ಬಾಂಬ್ ಶಬ್ದಗಳು ಕೇಳಿ ಬರುತ್ತಲೇ ಇರುತ್ತವೆ. ವರ್ಷದ ಕೊನೆಯಲ್ಲೂ ಇಂತಹ ದುರ್ಘಟನೆಗಳು ನಡೆಯುತ್ತಿವೆ. ಗುರುವಾರ ರಾತ್ರಿ, ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ನಗರದಲ್ಲಿ ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿದ್ದಾರೆ. ಪ್ರಮುಖ ಪ್ರದೇಶದಲ್ಲೇ ಬಾಂಬ್ ಸ್ಫೋಟವಾಗಿದ್ದರಿಂದ ನಾಲ್ವರು ಅಮಾಯಕರು ಸಾವನ್ನಪ್ಪಿದ್ದಾರೆ. ೧೫ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಕ್ವೆಟ್ಟಾ ನಗರದ ಪ್ರಮುಖ ಪ್ರದೇಶವಾದ ಜಿನ್ನಾ ರಸ್ತೆಯ ವಿಜ್ಞಾನ ಕಾಲೇಜಿನ ಬಳಿ ನಿಲ್ಲಿಸಿದ ಕಾರಿನ ಪಕ್ಕದಲ್ಲಿ ದುಷ್ಕರ್ಮಿಗಳು ಬಾಂಬ್ ಇಟ್ಟಿದ್ದರು. ಬಾಂಬ್ ಸ್ಫೋಟದ ತೀವ್ರತೆಗೆ ಸುತ್ತಮುತ್ತಲ ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ.