BengaluruPolitics

ಮೋದಿ ಕೊನೆಯ ರೋಡ್‌ ಶೋ ಆರಂಭ; ಎಲ್ಲೆಲ್ಲಿ ಸಂಚಾರ..?

ಬೆಂಗಳೂರು; ಮೋದಿ ಬೆಂಗಳೂರಿನಲ್ಲಿ ಎರಡನೇ ದಿನ ರೋಡ್‌ ಶೋ ಶುರು ಮಾಡಿದ್ದಾರೆ. ಮೊದಲಿಗೆ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮೋದಿ ನಂತರ ರೋಡ್‌ ಶೋ ಶುರು ಮಾಡಿದರು. ತಿಪ್ಪಸಂದ್ರದಿಂದ ಮೋದಿ ರೋಡ್‌ ಶೋ ಶುರುವಾಗಿದ್ದು, ಮೋದಿ ನೋಡಲು ಜನರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. 

ಇಂದು ಮೋದಿಯವರು ಸುಮಾರು 6.5 ಕಿಲೋ ಮೀಟರ್‌ವರೆಗೆ ರೋಡ್‌ ಶೋ ನಡೆಸಲಿದ್ದಾರೆ.  ನ್ಯೂ ತಿಪ್ಪಸಂದ್ರ ರಸ್ತೆಯಿಂದ ಟ್ರಿನಿಟಿ ಸರ್ಕಲ್ ವರೆಗೆ ಈ ರೋಡ್‌ ಶೋ ನಡೆಯಲಿದೆ.  ತಿಪ್ಪಸಂದ್ರದಿಂದ ಶುರುವಾಗಿ ಹೆಚ್​ಎಎಲ್ 2ನೇ ಹಂತ, 80 ಅಡಿ ರಸ್ತೆಯ ಜಂಕ್ಷನ್, ಹೆಚ್​ಎಎಲ್ 2ನೇ ಹಂತ, 12ನೇ ಮುಖ್ಯರಸ್ತೆ ಜಂಕ್ಷನ್, ಓಲ್ಡ್ ಮದ್ರಾಸ್ ರಸ್ತೆ ಮಾರ್ಗವಾಗಿ ಟ್ರಿನಿಟಿ ಸರ್ಕಲ್ ತಲುಪಲಿದೆ.

Share Post