Bengaluru

ನೈಟ್‌ ಕರ್ಫ್ಯೂ: ನಮ್ಮ ಮೆಟ್ರೊದಲ್ಲಿ ಬದಲಾವಣೆ

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಜನವರಿ ೭ರ ವರೆಗೆ ನೈಟ್‌ ಕರ್ಫ್ಯೂ ವಿಧಿಸಲಿದ್ದಾರೆ. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೋನಾ ಹಾಗೂ ಒಮಿಕ್ರಾನ್‌ ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿದೆ.ರಾತ್ರಿ ೧೦ ಗಂಟೆಯಿಂದ ೫ ಗಂಟೆಯವರೆಗೆ ರಾತ್ರಿ ನಿಷೇಧಾಜ್ಞೆ ಹೇರಲಾಗಿದೆ. ಹೀಗಾಗಿ ಅನಗತ್ಯ ಓಡಾಡುವುದರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಎಲ್ಲ ಸೇವೆಗಳು ನಗರದಲ್ಲಿ ಇರಲಿದೆ. ಅದೇ ರೀತಿ ನಮ್ಮ ಮೆಟ್ರೊದಲ್ಲೂ ಸಹ ಸಮಯ ಬದಲಾವಣೆ ಆಗಿದೆ ಎಂದು ಬಿಎಂಆರ್‌ ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ. ಇಂದಿನಿಂದ ರಾತ್ರಿ ೧೦ ಗಂಟೆ ನಂತರ ಕಡಿಮೆ ರೈಲುಗಳು ಸಂಚರಿಸಲಿದೆ. ಆದರೆ, ಈಗಿರುವ ಸಮಯಲ್ಲಿ ಬದಲಾವಣೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಡಿಸೆಂಬರ್‌ ೨೦ ರಿಂದ ಸೋಮವಾರದಿಂದ ಶನಿವಾರದವರೆಗೆ ಮೆಟ್ರೊ ಬೆಳಗ್ಗೆ ೫ ಗಂಟೆಯಿಂದ ಆರಂಭಗೊಳ್ಳಲಿದೆ ಎಂದು ತಿಳಿಸಿತ್ತು. ಭಾನುವಾರ ಮಾತ್ರ ಬೆಳಗ್ಗೆ ೭ ಗಂಟೆಯಿಂದ ಮೆಟ್ರೊ ಸೇವೆ ಪ್ರಾರಂಭ ಆಗುತ್ತಿತ್ತು. ಇದೀಗ ಕರ್ಫ್ಯೂನಿಂದ ಸಮಯದಲ್ಲಿ ಬದಲಾವಣೆಯಿಲ್ಲ. ಆದರೆ ರಾತ್ರಿ ೧೦ ಗಂಟೆ ಮೇಲೆ ರೈಲುಗಳು ಕಡಿಮೆಯಾಗಲಿದೆ ಎಂದು ಬಿಎಂಆರ್‌ ಸಿ ಎಲ್‌ ತಿಳಿಸಿದೆ.

Share Post