Sports

Ashes Series ಗೆದ್ದು ಬೀಗಿದ ಆಸ್ಟ್ರೇಲಿಯಾ

ಮೆಲ್ಬೋರ್ನ್‌ : ಆಶಸ್‌ ಸರಣಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಮತ್ತು ೧೪ ರನ್‌ ಅಂತರದಿಂದ ಇಂಗ್ಲೆಂಡ್‌ ತಂಡ ಸೋಲು ಒಪ್ಪಿಕೊಂಡಿದೆ. ಈ ಮೂಲಕ ಆಸ್ಟ್ರೇಲಿಯ ಸರಣಿಯನ್ನು ಗೆದ್ದು ಬೀಗಿದೆ. ಆಸ್ಟ್ರೇಲಿಯ ವೇಗಿ ಸ್ಕಾಟ್‌ ಬೋಲ್ಯಾಂಡ್‌ ಅವರ ಟೈಟ್‌ ಬೌಲಿಂಗ್‌ಗೆ ಇಂಗ್ಲೆಂಡ್‌ ಬಳಿ ಉತ್ತರವೇ ಇಲ್ಲದಂತೆ ಪರದಾಡಿತು.

ಮೊದಲು ಬೌಲಿಂಗ್‌ ಮಾಡಿದ ಆಸ್ಟ್ರೇಲಿಯ ಇಂಗ್ಲೆಂಡ್‌ ಅವರನ್ನು ಮೊದಲ ಇನ್ನಿಂಗ್ಸ್‌ನಲ್ಲಿ  ೧೮೫ ರನ್‌ಗೆ ಕಟ್ಟಿಹಾಕಿತ್ತು. ನಂತರ ಬ್ಯಾಟ್‌ ಮಾಡಿದ ಟೀಮ್‌ ಆಸ್ಟ್ರೇಲಿಯ ೨೬೭ ರನ್‌ ಗಳಿಸಿ 82 ರನ್‌ಗಳ ಮುನ್ನಡೆ ಪಡೆದಿತ್ತು.

ಸ್ಕಾಟ್‌ ಅವರ ಕರಾರುವಾಕ್‌ ಬೌಲಿಂಗ್‌ ದಾಳಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ೬೮ ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು. ಇದರೊಂದಿಗೆ ಆಸ್ಟ್ರೇಲಿಯ ಪಂದ್ಯದ ಜೊತೆಗೆ ಸರಣಿಯನ್ನು ಗೆದ್ದುಕೊಂಡಿದೆ.

Share Post