BengaluruPolitics

ಇಂದು ಸಿದ್ದರಾಮಯ್ಯ ಕೇಸ್‌ ವಿಚಾರಣೆ; ಸಿಎಂಗಿರುವ ಆಯ್ಕೆಗಳೇನು..?

ಬೆಂಗಳೂರು; ಇಂದು ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿರುವ ರಿಟ್‌ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್‌ನಲ್ಲಿ ನಡೆಯಲಿದೆ.. ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಿಗದಿಯಾಗಿದೆ.. ಸಿದ್ದರಾಮಯ್ಯ ಅವರ ಮನವಿಯನ್ನು ಕೋರ್ಟ್‌ ಪುರಸ್ಕರಿಸಿ, ರಾಜ್ಯಪಾಲರ ಪ್ರಾಸಿಕ್ಯೂಷನ್‌ ಅನುಮತಿಗೆ ಮಧ್ಯಂತರ ತಡೆ ನೀಡಿದರೆ ಮಾತ್ರ ಸಿದ್ದರಾಮಯ್ಯ ಅವರಿಗೆ ರಿಲೀಫ್‌.. ಇಲ್ಲದಿದ್ದರೆ ಕಾನೂನು ಸಂಕಷ್ಟ ಶುರುವಾಗುತ್ತದೆ.. ಇದರಿಂದ ರಾಜ್ಯದಲ್ಲಿ ರಾಜಕೀಯ ತಲ್ಲಣಕ್ಕೂ ಕಾರಣವಾಗುತ್ತದೆ..
ಒಂದು ವೇಳೆ ಸಿಎಂ ಮನವಿಯನ್ನು ಹೈಕೋರ್ಟ್‌ ಪುರಸ್ಕರಿಸಿದರೆ ಸಿದ್ದರಾಮಯ್ಯ ಅವರು ಕಾನೂನೂ ಸಂಕಷ್ಟದಿಂದ ಸದ್ಯಕ್ಕಿ ರಿಲೀಫ್‌ ಹೊಂದಬಹುದು.. ಅವರ ಸಿಎಂ ಸ್ಥಾನಕ್ಕೂ ತೊಂದರೆ ಇರೋದಿಲ್ಲ.. ಇದರಿಂದ ರಾಜ್ಯಪಾಲರ ಆದೇಶಕ್ಕೆ ಹಿನ್ನಡೆಯಾದಂತಾಗುತ್ತದೆ.. ಸರ್ಕಾರದಲ್ಲಿ ಮತ್ತೆ ಆತ್ಮವಿಶ್ವಾಸ ಬರುವುದಲ್ಲದೆ, ಸಿದ್ದರಾಮಯ್ಯ ಬೆಂಬಲಿಗರಿಗೆ ಮತ್ತಷ್ಟು ಶಕ್ತಿ ಸಿಗಲಿದೆ..
ಒಂದು ವೇಳೆ ರಾಜ್ಯಪಾಲರ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡದೇ ಹೋದರೆ, ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡುತ್ತದೆ.. ಆಗ ಸಿಎಂ ವಿರುದ್ಧ ಎಫ್‌ಐಆರ್‌ ದಾಖಲಾಗಲಿದ್ದು, ಅವರ ವಿಚಾರಣೆ ನಡೆಯುವ ಸಾಧ್ಯತೆ ಇರುತ್ತದೆ.. ಈ ಪರಿಸ್ಥಿತಿ ಬಂದರೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪ್ರಸಂಗ ಎದುರಾಗಬಹುದು.. ಹೈಕಮಾಂಡ್‌ ಶಕ್ತಿ ತುಂಬಿದರೆ ಸಿದ್ದರಾಮಯ್ಯ ಅವರು ಕಾನೂನು ಹೋರಾಟ ಮುಂದುವರೆಸಬಹುದು.. ಸಿಎಂ ಆಗಿದ್ದುಕೊಂಡೇ ಸುಪ್ರೀಂಕೋರ್ಟ್‌ನಲ್ಲಿ ಹೈಕೋರ್ಟ್‌ ಆದೇಶನ್ನು ಪ್ರಶ್ನೆ ಮಾಡೋದಕ್ಕೆ ಅವಕಾಶವಿದೆ.. ಇದರ ಜೊತೆಗೆ ಪಕ್ಷದ ವತಿಯಿಂದಲೂ ಬೀದಿಗಿಳಿದು ಹೋರಾಟಗಳನ್ನು ಂಆಡಬಹುದು..

Share Post