Bengaluru

ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ ಹೇಗಿದೆ ಗೊತ್ತಾ?

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮತ್ತು ರೂಪಾಂತರಿ ತಳಿ ಒಮಿಕ್ರಾನ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮ ಜಾರಿ ಮಾಡಿದೆ. ನೈಟ್‌ ಕರ್ಫ್ಯೂ ಜೊತೆಗೆ ವೀಕೆಂಡ್‌ ಕರ್ಫ್ಯೂ ಕೂಡ ವಿಧಿಸಿದೆ. ರಾಜ್ಯದಲ್ಲಿ ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ೫ ಗಂಟೆಯವರೆಗೆ ವೀಕೆಂಡ್‌ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ವೀಕೆಂಡ್‌ ಕರ್ಫ್ಯೂ ಹೇಗಿದೆ ನೋಡೋಣ ಬನ್ನಿ….
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವೀಕೆಂಡ್‌ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಯಾರು ಓಡಾಡುತ್ತಿಲ್ಲ. ಒಂದು ವೇಳೆ ಜನರು ಓಡಾಡಿದರೆ, ಪೊಲೀಸರು ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ನಗರದ ಪ್ರಮುಖ ಮಾರುಕಟ್ಟೆಗಳು ಬಂದ್‌ ಆಗಿದೆ.
ಧಾರವಾಡದಲ್ಲೂ ಸಹ ಜನರು ಓಡಾಟ ಕಡಿಮೆ ಇದೆ. ಯಾರೂ ಕೂಡ ಅನಗತ್ಯವಾಗಿ ಹೊರಗೆ ಬರುತ್ತಿಲ್ಲ.
ಇನ್ನು ಕಲಬುರಗಿಯಲ್ಲಿ ಜನರು ವೀಕೆಂಡ್‌ ಕರ್ಫ್ಯೂ ಲೆಕ್ಕಿಸದೆ ಓಡಾಡುತ್ತಿದ್ದಾರೆ. ಬೆಳಗ್ಗೆಯಿಂದ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿರುವುದು ಕಂಡು ಬಂದಿದೆ. ಜೊತೆಗೆ ಮಾಸ್ಕ್‌ ಧರಿಸದೆ ಕೋವಿಡ್‌ ನಿಯಮ ಉಲ್ಲಂಘಿಸಿದ್ದಾರೆ.
ಕುಂದಾನಗರಿ ಬೆಳಗಾವಿಯಲ್ಲೂ ಕೂಡ ಎಂದಿನಂತೆ ಬಸ್‌ ಓಡಾಡುತ್ತಿವೆ.
ಇತ್ತ ವಿಜಯಪುರದಲ್ಲಿ ಕರ್ಫ್ಯೂ ಇದ್ದರೂ ಕೂಡ ಜನ ಗುಂಪಾಗಿ ನಿಂತು ಮಾತುಕತೆ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.
ಗಣಿನಗರಿ ಬಳ್ಳಾರಿಯಲ್ಲಿ ಎಂದಿನಂತೆ ಜನರು ಸಂಚರಿಸುತ್ತಿದ್ದಾರೆ. ಎಲ್ಲ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೆಡ್‌ ಹಾಕಿದ್ದಾರೆ. ಆದರೂ ಜನರು ಮಾಸ್ಕ್‌ ಧರಿಸದೆ ಓಡಾಟ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಬಸ್‌ ಗಳಿದ್ದರೂ ಕೂಡ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಇಲ್ಲಿನ ಜನರು ವೀಕೆಂಡ್‌ ಕರ್ಫ್ಯೂಗೆ ಸಹಕಾರ ನೀಡಿದ್ದಾರೆ.

 

Share Post