ಆಸ್ಪತ್ರೆಯಲ್ಲಿ ವೃದ್ಧೆಯನ್ನು ಸೆಕ್ಸ್‌ಗೆ ಪೀಡಿಸಿದ ಯುವಕ; ಆರೋಪಿ ಅರೆಸ್ಟ್
ಬೆಂಗಳೂರು; ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಯನ್ನು ಸೆಕ್ಸ್‌ಗೆ ಪೀಡಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಬಂಧಿಸಲಾಗಿದೆ. ಅಶೋಕ್ ಎಂಬ ಯುವಕನೇ ಬಂಧಿತ ಆರೋಪಿಯಾಗಿದ್ದಾನೆ. ಈತ ಹೆಬ್ಬಾಳದ ಖಾಸಗಿ ಆಸ್ಪತ್ರೆಯ ಸಿಟಿ ಸ್ಕ್ಯಾನ್ ವಿಭಾಗದಲ್ಲಿ ಕೆಲಸ ಮಾಡುತ್ತಾನೆ.
ಆಗಸ್ಟ್ 3ರಂದು ವೃದ್ಧೆಯೊಬ್ಬರು ಅನಾರೋಗ್ಯಕ್ಕೆ ಈಡಾಗಿದ್ದರು. ಹೆಬ್ಬಾಳದಲ್ಲಿರೋ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆಗಸ್ಟ್ 4ರಂದು ಬೆಳಗಿನಜಾವ 1.30ರ ಸುಮಾರಿಗೆ ಆರೋಪಿ ಅಶೋಕ್, ಸಿಟಿ ಸ್ಕ್ಯಾನ್ ಮಾಡಬೇಕೆಂದು ಕರೆದೊಯ್ದಿದ್ದಾನೆ. ಮಷನ್ ಮೇಲೆ ಮಲಗಿಸಿದ ಆತ, ವೃದ್ಧೆಯನ್ನು ವಿವಸ್ತ್ರಗೊಳಿಸಿದ್ದಾನೆ. ಅನಂತರ ಸೆಕ್ಸ್‌ಗೆ ಸಹಕರಿಸುವಂತೆ ಆಕೆಯನ್ನು ಪೀಡಿಸಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ವೃದ್ಧೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.