75 ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತರಿಗೆ ಟಿಕೆಟ್ ನೀಡಲು ಆಗ್ರಹ
ಬೆಂಗಳೂರು; ಬೆಂಗಳೂರಿನ ಬಸವ ಸಮಿತಿಯ ಸಭಾಂಗಣದಲ್ಲಿ ನಿನ್ನೆ ರಾತ್ರಿ ಕಾಂಗ್ರೆಸ್ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಹಾಗು ಟಿಕೇಟ್ ಆಕಾಂಕ್ಷಿಗಳ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ವೀರಶೈವ ಲಿಂಗಾಯತ ಸಮುದಾಯದ ನಾಯಕರಾದ ಶಾಮನೂರು ಶಿವಶಂಕರಪ್ಪ, ಅಲ್ಲಂ ವೀರಭದ್ರಪ್ಪ, ಈಶ್ವರ್ ಖಂಡ್ರೆ, ಎಂ ಬಿ ಪಾಟೀಲ್, ಡಾ. ಶರಣ ಪ್ರಕಾಶ್ ಪಾಟೀಲ್, ಬಿ ಆರ್ ಪಾಟೀಲ್, ವಿನಯ್ ಕುಲಕರ್ಣಿ, ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ನಾಯಕರು ಭಾಗವಹಿಸಿದ್ದರು.
ರಾಜ್ಯ ಕಾಂಗ್ರೆಸ್ ನಾಯಕರ ಎದುರು ಮಹತ್ವದ ಪ್ರಮುಖ ಬೇಡಿಕೆಗಳನ್ನ ಸಮುದಾಯದ ಮುಖಂಡರು ಇಟ್ಟಿದ್ದಾರೆ. ಕಾಂಗ್ರೇಸ್ ನಲ್ಲಿ ವೀರೇಂದ್ರ ಪಾಟೀಲ್ ಬಳಿಕ ಲಿಂಗಾಯತ ಸಮುದಾಯದ ನಾಯಕರಿಗೆ ಸಿಎಂ ಪಟ್ಟ ಸಿಕ್ಕಿಲ್ಲ,ಇನ್ನು ಎಷ್ಟು ವರ್ಷಗಳ ಕಾಲ ಲಿಂಗಾಯತ ಸಮುದಾಯದ ನಾಯಕರು ಸಿಎಂ ಪಟ್ಟಕ್ಕಾಗಿ ಕಾಯಬೇಕು, ಈ ಬಾರಿಯಾದರೂ ಲಿಂಗಾಯತ ಸಿಎಂ ಬೇಡಿಕೆ ಇಡುವಂತೆ ಸಭೆಯಲ್ಲಿ ಭಾಗವಹಿಸಿದ್ದ ಆಕಾಂಕ್ಷಿಗಳು, ಸಮುದಾಯದ ನಾಯಕರು ಆಗ್ರಹಿಸಿದರು.
ಹಾಗೂ ಸಮುದಾಯದ ಮತಗಳನ್ನ ಕಾಂಗ್ರೇಸ್ ಪರ ಸೆಳೆಯುವ ವಿಚಾರಚಾಗಿ ಚಚೆ೯ ನಡೆಸಲಾಯಿತು. ವೀರಶೈವ ಲಿಂಗಾಯತ ಸಮುದಾಯದ ಬಿಜೆಪಿ ಪರವಾಗಿದ್ದಾರೆ. ಸಮುದಾಯಾದ ಮತಗಳು ಕಾಂಗ್ರೇಸ್ ಗೆ ಕಡಿಮೆ ಪ್ರಮಾಣದಲ್ಲಿ ಬೀಳುತ್ತಿವೆ ಇದು ಚುನವಾಣೆಯಲ್ಲಿ ಕಾಂಗ್ರೇಸ್ ಗೆ ಹಿನ್ನಡೆಯಾಗುವ ಸಾದ್ಯತೆ ಇದೆ, ಹಾಗಾಗಿ ಸಮುದಾಯದ ಮತಗಳನ್ನ ಸೆಳೆಯಬೇಕಾದರೆ ಈ ಬಾರಿ ಸಮುದಾಯದ ಅಭ್ಯಥಿ೯ಗಳಿಗೆ ಪಕ್ಷ ಕಳೆದಬಾರಿಗಿಂತ ಹೆಚ್ಚಿನ ಮನ್ನಣೆ ನೀಡ ಬೇಕು. ಹಾಗದಲ್ಲಿ ಮಾತ್ರ ವೀರಶೈವ ಲಿಂಗಾಯತ ಸಮುದಾಯ ಕಾಂಗ್ರೇಸ್ ಕಡೆ ಒಲವು ತೋರುತ್ತದೆ ಎಂದು ಸಭೆಯಲ್ಲಿ ಚಚಿ೯ಸಲಾಯಿತು.
ಲಿಂಗಾಯತ ಸಮುದಾಯದ 210 ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಸುಮಾರು 75 ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿದ್ದಾರೆ, ಗೆಲ್ಲುವ ಸಾಮರ್ಥ್ಯ ಇರುವ ಆಕಾಂಕ್ಷಿಗಳಿಗೆ ಟಿಕೆಟ್ ಕೊಡಲೇಬೇಕು, ಲಿಂಗಾಯತ ಸಮುದಾಯದ ಒಳಪಂಗಡಗಳನ್ನೂ ಒಟ್ಟಿಗೆ ಸೇರಿಸಿ ಕಾಂಗ್ರೆಸ್ಸಿ ಬೆಂಬಲ ಕೊಡಿಸಲು ಪ್ರಯತ್ನ ಮಾಡಬೇಕು ಹಾಗೂ ಎಲ್ಲಾ ಲಿಂಗಾಯತ, ವೀರಶೈವ ಹಿರಿಯ ಮುಖಂಡರು ಶೀಘ್ರದಲ್ಲೇ ಪಟ್ಟಿ ತಯಾರಿಸಿ ಈ ಬಗ್ಗೆ ಹೈಕಮಾಂಡ್ ಹಾಗೂ ಉಸ್ತುವಾರಿಗಳ ಗಮನ ಸೆಳೆಯಬೇಕು ಎಂಬ ಆಗ್ರಹ ಮಾಡಲಾಯಿತು.
ಕಳೆದ ಬಾರಿ ವೀರಶೈವ ಲಿಂಗಾಯತ ಸಮುದಾಯದವರಿಗೆ ಕೇವಲ 45 ಕ್ಷೇತ್ರಗಳಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ 75 ಅಭ್ಯಥಿ೯ಗಳಿಗೆ ಅವಕಾಶ ನೀಡ ಬೇಕೆಂದು ಪಕ್ಷದ ಮುಂದೆ ಕೇಳಲಿದ್ದಾರೆ. ಹಾಗೇ ಬೆಂಗಳೂರು ನಗರದಲ್ಲಿ ವೀರಶೈವ ಲಿಂಗಾಯತ ಸಮುದಾಯ ಒಬ್ಬ ಶಾಸಕರೂ ಇಲ್ಲ ಅಲ್ಲದೆ ನಮ್ಮ ಸಮುದಾಯದ ಯಾವ ಅಭ್ಯಥಿ೯ಗಳಿಗೂ ಕಳೆದ ಬಾರಿ ಚುನಾವಣೆಯಲ್ಲಿ ಟಿಕೇಟ್ ನೀಡಿರಲಿಲ್ಲ ಹಾಗಾಗಿ ಈ ಬಾರಿ ನಮ್ಮ ಸಮುದಾಯಾದ ಇಬ್ಬರು ಅಭ್ಯಥಿ೯ಗಳಿಗೆ ಕಾಂಗ್ರೇಸ್ ಪಕ್ಷದ ಟಿಕೇಟ್ ನೀಡಬೇಕೆಂದು ಮುಖಂಡರು ಆಗ್ರಹಿಸಿದರು, ಚಿಕ್ಕ ಪೇಟೆ ವಿಧಾನ ಸಭಾ ಕ್ಷೇತ್ರಕ್ಕೆ ಗಂಗಾಂಬಿಕಾ ಮಲ್ಲಿಕಾಜು೯ನ್ ಹಾಗು ರಾಜಾಜಿನಗರ ವಿಧಾನ ಸಭಾ ಕ್ಷೇತ್ರಕ್ಕೆ ಬಿ ಎಸ್ ಪುಟ್ಟರಾಜು ರವರಿಗೆ ಟಿಕೇಟ್ ನೀಡಬೇಕಂಬ ಬೇಡಿಕೆಯನ್ನ ಪಕ್ಷದ ಮುಂದೆ ಇಡುವ ಬಗ್ಗೆ ತೀಮಾ೯ನಿಸಲಾಯಿತು.