Bengaluru

ಇದು ನಿಜವಾಗಿಯೂ ಆತ್ಮ ನಿರ್ಭರ ಬಜೆಟ್‌ ಆಗಿದೆ:ಸಿಎಂ ಬೊಮ್ಮಾಯಿ

ಬೆಂಗಳೂರು: ಪ್ರಧಾನಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರ ಆತ್ಮ ನಿರ್ಭರ ಭಾರತದ ಅಡಿಯಲ್ಲಿ ಇಂದಿನ ಕೇಂದ್ರದ ಬಜೆಟ್‌ ಘೋಷಣೆ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ಅನ್ನದಾತರ ಕಲ್ಯಾಣಕ್ಕೆ ಘೋಷಣೆ ಮಾಡಿರುವ ಯೋಜನೆಗಳು ರೈತನ ಮೇಲೆ ಸರ್ಕಾರಕ್ಕಿರುವ ಬದ್ಧತೆಯನ್ನು ತಿಳಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಟ್ವೀಟ್‌ ಮಾಡಿದ್ದಾರೆ.

ಕೃಷಿ ಉತ್ತೇಜನಕ್ಕಾಗಿ 2.37 ಲಕ್ಷ ಕೋಟಿ ರೂಪಾಯಿಗಳನ್ನು 163 ಲಕ್ಷ ರೈತರ ಖಾತೆಗಳಿಗೆ  ನೇರ ಪಾವತಿ ಮಾಡಲಿದ್ದಾರೆ. ದೇಶಾದ್ಯಂತ ಗೋಧಿ ಮತ್ತು ಭತ್ತ  ಖರೀದಿ ಹಾಗೂ ಕೃಷಿಯಲ್ಲಿ ರಾಸಾಯನಿಕ ಮುಕ್ತ ಹಾಗೂ ನೈಸರ್ಗಿಕ ಬೆಳೆ ಬೆಳೆಯಲು ಉತ್ತೇಜನ  ನೀಡಲು ಬಹುದೊಡ್ಡ ಅನುದಾನವನ್ನು ಘೋಷಣೆ ಮಾಡಿದ್ದಾರೆ.

ಕೃಷಿ ಮತ್ತು ಗ್ರಾಮೀಣ ಉದ್ಯಮಗಳಿಗೆ ಸ್ಟಾರ್ಟ್-ಅಪ್‌ಗಳಿಗೆ ಹಣಕಾಸು ಒದಗಿಸಲು ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳ ಪರಿಷ್ಕರಣೆಗಾಗಿ ನಬಾರ್ಡ್‌ನಿಂದ ಅನುದಾನ ಘೋಷಿಸಲಾಗಿದೆ. ನಮ್ಮ ಕೇಂದ್ರ ಬಿಜೆಪಿ ಸರ್ಕಾರವು ನಿಜವಾಗಿಯೂ ನಮ್ಮ ಆರ್ಥಿಕತೆಯ ಬೆನ್ನೆಲುಬನ್ನು ಸಶಕ್ತಗೊಳಿಸಲು  ಅವಶ್ಯಕತೆಯಿರುವ ಎಲ್ಲಾ ಕಾರ್ಯಗಳನ್ನು ಮಾಡುತ್ತಿದೆ ಎಂದು ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ವಿವಿಧ ಘೋಷಣೆಗಳೊಂದಿಗೆ ಕರ್ನಾಟಕದ ಅಭಿವೃದ್ಧಿ ಚಟುವಟಿಕೆಗಳು ಭಾರಿ ಉತ್ತೇಜನವನ್ನು ಪಡೆಯುತ್ತವೆ. ಮತ್ತು ರಾಜ್ಯ ಸರ್ಕಾರಕ್ಕೆ ಹಂಚಿಕೆ  ಮಾಡಲಾದ ಸಂಪನ್ಮೂಲಗಳನ್ನು ಪರಿಣಾಮಕಾರಿಕಾಯಿ  ಬಳಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಟ್ವೀಟ್‌ ಮಾಡಿದ್ದಾರೆ.

Share Post