BengaluruPolitics

ವಿಪಕ್ಷಗಳ ಮೈತ್ರಿಕೂಟಕ್ಕೆ `INDIA’ ಎಂಬ ಹೆಸರು..!; ಏನು ಇದರ ಅರ್ಥ..?

ಬೆಂಗಳೂರು; ವಿಪಕ್ಷಗಳ ಸಭೆಯಲ್ಲಿ ಎಲ್ಲಾ 26 ಪಕ್ಷಗಳೂ ಸಾಮೂಹಿಕ ಸಂಕಲ್ಪ ಮಾಡಿ ಸಹಿ ಹಾಕಿವೆ. ಎಲ್ಲಾ ಭಿನ್ನಾಭಿಪ್ರಾಯಗಳನ್ನೂ ಮರೆತು ಒಂದಾಗಲು ಎಲ್ಲರೂ ಒಪ್ಪಿದ್ದಾರೆ. ಅವರ ಈ ಒಕ್ಕೂಟಕ್ಕೆ INDIA ಎಂಬ ಹೆಸರನ್ನಿಡಲು ಪ್ರಸ್ತಾವನೆ ಬಂದಿದೆ. ಇದಕ್ಕೆ ಬಹುತೇಕ ಎಲ್ಲಾ ಪಕ್ಷಗಳ ನಾಯಕರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಬಾರಿ ವಿಪಕ್ಷಗಳ INDIA ಹೆಸರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕದನಕ್ಕಿಳಿಯೋದು ಬಹುತೇಕ ಪಕ್ಕಾ ಆಗಿದೆ.

INDIA ಅಂದರೆ ಏನು ಗೊತ್ತಾ..? ಇಂಡಿಯನ್‌ ನ್ಯಾಷನಲ್‌ ಡೆವೆಲಪ್‌ಮೆಂಟಲ್‌ ಇನ್‌ಕ್ಲೂಸಿವ್‌ ಅಲಯನ್ಸ್. ಈ ಹೆಸರಿನೊಂದಿಗೆ 26 ಪಕ್ಷಗಳು ಒಗ್ಗಟ್ಟಾಗಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳನ್ನು ಎದುರಿಸೋದಕ್ಕೆ ಒಪ್ಪಿಗೆ ಸೂಚಿಸಿವೆ. ಇನ್ನು ಸೀಟು ಹಂಚಿಕೆ ಸಂಬಂಧ ಭಿನ್ನಾಭಿಪ್ರಾಯಗಳು ಎದುರಾಗೋ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯವಾರು ಪ್ರತ್ಯೇಕ ಸಮಿತಿಗಳನ್ನು ರಚಿಸಿ, ಆ ಸಮಿತ ಗಳ ಮೂಲಕವೇ ಸೀಟುಗಳ ಹಂಚಿಕೆ ಮಾಡೋದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Share Post