Bengaluru

ರಾಜ್ಯದಲ್ಲಿ ಮತ್ತೆ 10 ಓಮಿಕ್ರಾನ್‌ ಸೋಂಕು ಪತ್ತೆ – 76ಕ್ಕೆ ಏರಿದ ಓಮಿಕ್ರಾನ್

ಬೆಂಗಳೂರು : ರಾಜ್ಯದಲ್ಲಿ ಮತ್ತೆ 10 ಹೊಸ ಓಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್‌ ತಮ್ಮ ಟ್ವಿಟರ್‌ ಖಾತೆಯ ಮೂಲಕ ತಿಳಿಸಿದ್ದಾರೆ. ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್‌ ಸಮುದಾಯಕ್ಕೆ ಹಬ್ಬಿರುವ ಸೂಚನೆಗಳು ಸಿಗುತ್ತಿದೆ.

ಈ ೧೦ ಹೊಸ ಪ್ರಕರಣಗಳಿಂದ ಒಟ್ಟು ಓಮಿಕ್ರಾನ್‌ ಸಂಖ್ಯೆ 76ಕ್ಕೆ ತಲುಪಿದೆ ಎಂದು ಸಚಿವ ಡಾ. ಕೆ ಸುಧಾಕರ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬೆಂಗಳೂರಲ್ಲಿ ೮ ಪ್ರಕರಣಗಳು ದಾಖಲಾದರೆ ಧಾರವಾಡದಲ್ಲಿ ೨ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ ೮ ಪ್ರಕರಣಗಳಲ್ಲಿ  ೫ ಪ್ರಕರಣಗಳಿಗೆ ಹೊರದೇಶದ ಟ್ರಾವೆಲ್‌ ಹಿಸ್ಟರಿ ಇದೆ.

Share Post