Bengaluru

ಪಾಸಿಟಿವಿಟಿ ರೇಟ್‌ ಹೆಚ್ಚಾದರೆ ಲಾಕ್‌ಡೌನ್‌ ಫಿಕ್ಸ್‌

ಬೆಂಗಳೂರು : ದಿನಕಳೆದಂತೆ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗ್ತಿವೆ. ಕಳೆದವಾರದಿಂದ ರಾಜ್ಯಾದ್ಯಾಂತ ನೈಟ್‌ ಕರ್ಫ್ಯೂ ಹೇರಿಕೆ ಆಗಿದ್ದರೂ ಕೋವಿಡ್‌ ಕೇಸ್‌ಗಳು ಹೆಚ್ಚುತ್ತಲೇ ಇವೆ. ಜನವರಿ ೬ಕ್ಕೆ ನೈಟ್‌ ಕರ್ಫ್ಯೂ ಅವಧಿ ಮುಕ್ತಾಯವಾಗುತ್ತೆ. ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಅವಧಿ ವಿಸ್ತರಿಸೋದು ಬಹುತೇಕ ಪಕ್ಕ ಆಗ್ತಿದೆ.

ತಜ್ಞರ ಜೊತೆ ಸಿಎಂ ತಂಡ ಸಮಾಲೋಚನೆ ನಡೆಸುತ್ತಿದ್ದು ಬೆಂಗಳೂರು ಸೇರಿದಂತೆ ಪ್ರಮುಖ ಭಾಗಗಳಲ್ಲಿ ಟಫ್‌ ರೂಲ್ಸ್‌ ಜಾರಿ ಮಾಡುವ ಸಾಧ್ಯತೆ ಇದೆ. ಈಗಾಗಲೇ ವೆಸ್ಟ್‌ ಬೆಂಗಾಲ್‌ ಸೆಮಿ ಲಾಕ್‌ಡೌನ್‌ ಘೋಷಣೆ ಮಾಡಿದೆ. ಅದೇ ರೀತಿ ಅನುಸರಿಸುವ ಬಗ್ಗೆ ಆರ್‌ ಅಶೋಕ್‌ ಸುಳಿವು ಕೊಟ್ಟಿದ್ದಾರೆ.

ಕಳೆದ ವಾರದಲ್ಲಿ ಪಾಸಿಟಿವಿಟಿ ರೇಟ್‌ 1.04ಕ್ಕೆ ಏರಿದೆ. ಒಂದು ವೇಳೆ ಪಾಸಿಟಿವಿಟಿ ರೇಟ್‌ 5ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್‌ ಅನಿವಾರ್ಯ ಅಂತಿದ್ದಾರೆ ತಜ್ಞರು. ಅಥವಾ ಶೇ40 ಕ್ಕೂ ಹೆಚ್ಚು ಐಸಿಯು ಬೆಡ್‌ ಬಳಕೆ ಆದರೆ ಕೂಡ ಲಾಕ್‌ ಡೌನ್‌ ಅನಿವಾರ್ಯ ಎಂದು ತಜ್ಞರು ವರದಿ ಸಲ್ಲಿಸಿದ್ದಾರೆ. ಇದರಿಂದ ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಪೆಟ್ಟು ಬೀಳಲಿದೆ.

ರಾಜ್ಯಕ್ಕೆ ಮಹಾರಾಷ್ಟ್ರಾ ಮತ್ತು ಕೇರಳದಿಂದ ಬರುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಾಣುವ ಭೀತಿ ಎದುರಾಗಿದೆ.

Share Post