ಇತಿಹಾಸ ಸೃಷ್ಠಿಸುವತ್ತ ವಿರಾಟ್ ಚಿತ್ತ
ಜೋಹಾನ್ಸ್‌ಬರ್ಗ್ : ನವವರ್ಷದಲ್ಲಿ ಇತಿಹಾಸ ಸೃಷ್ಠಿಸಲು ವಿರಾಟ್ ಕೊಹ್ಲಿ ಪಡೆ ಸಜ್ಜಾಗಿದೆ. ಭಾರತವು ಇದುವರೆಗೂ ದ.ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿಲ್ಲ. ಈಗ ಆ ಕನಸನ್ನು ನನಸು ಮಾಡಿಕೊಳ್ಳಲು ಸದಾವಕಾಶ ಬಂದೊದಗಿದೆ. ಇಂದಿನಿಂದ ಶುರುವಾಗುವ ವಾಡರರ್ಸ್ ಕ್ರೀಡಾಂಗಣದ ಪಂದ್ಯದಲ್ಲಿ ಭಾರತವು ಜಯ ಸಾಧಿಸಿದರೆ ಇತಿಹಾಸ ದಾಖಲಿಸಲಿದೆ.
ಬಾಕ್ಸಿಂಗ್ ಡೇ ದಿನ ಸೆಂಚೂರಿಯನ್‌ನಲ್ಲಿ ಪ್ರಾರಂಭವಾದ ಟೆಸ್ಟ್ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. ಈ ಮೂಲಕ ಸೆಂಚೂರಿಯನ್‌ನಲ್ಲಿ ಟೆಸ್ಟ್ ಗೆದ್ದ ಏಷ್ಯದ ಮೊದಲ ತಂಡ ಎಂಬ ಗೌರವಕ್ಕೆ ಭಾರತ ಪಾತ್ರವಾಗಿತ್ತು.
ವಿರಾಟ್ ಕೊಹ್ಲಿ ನಾಯಕತ್ವದ ಟೆಸ್ಟ್ ತಂಡ ಇಂಗ್ಲೆಂಡ್ , ಆಸ್ಟ್ರೇಲಿಯಾಗಳಲ್ಲಿ ಸರಣಿ ಜಯಸಿತ್ತು. ಈಗ ದ.ಆಫ್ರಿಕಾದಲ್ಲಿಯೂ ಸರಣಿ ಗೆದ್ದ ನಾಯಕನೆಂಬ ಕೀರ್ತಿಗೆ ಭಾಜನರಾಗಲು ವಿರಾಟ್ ತುದಿಗಾಲಲ್ಲಿ ನಿಂತಿದ್ದಾರೆ. ಈ ಸರಣಿಯನ್ನು ವಿರಾಟ್ ಪಡೆ ಗೆದ್ದರೆ ಇತಿಹಾಸ ಸೃಷ್ಠಿಯಾಗಲಿದೆ ದ.ಆಫ್ರಿಕಾ ಮುಂಚಿನಷ್ಟು ಬಲಿಷ್ಠ ತಂಡವಾಗಿಲ್ಲ. ಇದರಿಂದ ಭಾರತವೇ ಗೆಲ್ಲುವ ಫೇವರೆಟ್ ತಂಡವಾಗಿ ಕಣಕ್ಕಿಳಿಯಲಿದೆ.
ಭಾರತೀಯ ಕಾಲಮಾನದ ಪ್ರಕಾರ ಇಂದು ಮಧ್ಯಾಹ್ನ 1.30ಕ್ಕೆ ಪಂದ್ಯ ಆರಂಭವಾಗಲಿದೆ.