BengaluruCrimePolitics

ಚುನಾವಣಾ ಅಕ್ರಮದಲ್ಲಿ ಸಿಕ್ಕಿದ್ದೆಷ್ಟು..?; ಇಷ್ಟೊಂದು ನಗದು ಜಪ್ತಿಯಾಯ್ತಾ..?

ಬೆಂಗಳೂರು; ಎಷ್ಟೇ ಬಿಗಿ ಮಾಡಿದರೂ ಚುನಾವಣಾ ಅಕ್ರಮಗಳು ನಡೆದೇ ಇವೆ. ಸಾವಿರಾರು ಚೆಕ್‌ ಪೋಸ್ಟ್‌ಗಳನ್ನು ಸ್ಥಾಪನೆ ಮಾಡಿದ್ದರೂ, ಅಧಿಕಾರಿಗಳ ಕಣ್ತಪ್ಪಿಸಿ ಚುನಾವಣೆಯಲ್ಲಿ ಅಕ್ರಮಗಳನ್ನು ಎಸಗಲಾಗುತ್ತದೆ. ಇದರ ನಡುವೆ ಅಧಿಕಾರಿಗಳು ಭಾರಿ ಪ್ರಮಾಣದ ಅಕ್ರಮಗಳನ್ನು ತಡೆದಿದ್ದಾರೆ. ಇದುವರೆಗೆ ರಾಜ್ಯಾದ್ಯಂತ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಒಟ್ಟು 105 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಿದ ಎಲ್ಲಾ ವಸ್ತುಗಳ ಬೆಲೆಯೂ ಸೇರಿದರೆ ವಶಕ್ಕೆ ಪಡೆದ ವಸ್ತುಗಳ ಒಟ್ಟು ಮೌಲ್ಯ 230 ಕೋಟಿ ರೂಪಾಯಿ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಈವರೆಗೆ 53,406 ವ್ಯಕ್ತಿಗಳ ವಿರುದ್ಧ ಬಾಂಡ್ ಓವರ್ ಮಾಡಿದೇವೆ ಎಂದು ತಿಳಿಸಿದ್ದಾರೆ. ಭದ್ರತಾ ಪ್ರಕರಣ ಉಲ್ಲಂಘಿಸಿದ ಕಾರಣಕ್ಕಾಗಿ ಇದುವರೆಗೂ 115 ಪ್ರಕರಣಗಳನ್ನು ರಾಜ್ಯದ ವಿವಿಧೆಡೆ ದಾಖಲು ಮಾಡಲಾಗಿದೆ. 714 ಜನರನ್ನು ಗಡಿಪಾರ ಮಾಡಲಾಗಿದೆ ಎಂದು ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಈವರೆಗೆ ಸಿಕ್ಕ ಹಣ – 10,93,97,005 ರೂ.
ವಶಪಡಿಸಿಕೊಂಡ ಬಂಗಾರ – 28.5 ಕೆಜಿ
ಬೆಳ್ಳಿಯ ವಸ್ತುಗಳು – 140 ಕೆಜಿ
ಉಚಿತ ಉಡುಗೊರೆಗಳು – 9,72,87,071 ರೂ.
ಡ್ರಗ್ಸ್‌ – 29,51,54,780 ರೂ.

Share Post