ಮದುವೆ ಎಂದರೆ ಜೈಲು ಸಮಾನ; ಮತ್ತೊಮ್ಮೆ ಸುದ್ದಿಯಾದ ರಾಮ್ಗೋಪಾಲ್ ವರ್ಮಾ
ಮುಂಬೈ: ವಿಭಿನ್ನ ಹಾಗೂ ವಿವಾದಿತ ಹೇಳಿಕೆಗಳನ್ನು ನೀಡಿ ಸದಾ ಸುದ್ದಿಯಲ್ಲಿರುವ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ಮತ್ತೊಂದು ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ. ನಟ ದನುಷ್ ಹಾಗೂ ಐಶ್ವರ್ಯಾ ವಿಚ್ಛೇದನ ಪಡೆದಿರುವುದರ ಬಗ್ಗೆ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಮದುವೆ ಎಂಬುದು ಅತ್ಯಂತ ವೇಗವಾಗಿ ಮಾಡುವ ಕೊಲೆ ಪ್ರಯತ್ನ. ಮದುವೆ ಎಂಬ ಜೈಲು ಸೇರುವ ಬದಲು ಪ್ರೀತಿಯಿಂದ ಹೊರ ಬರುವುದು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ.
ಮದುವೆ ಮೇಲಿನ ಪ್ರೀತಿ ಕೇವಲ ೩ ರಿಂದ ೫ ದಿನಗಳು ಮಾತ್ರ ಉಳಿಯುತ್ತದೆ. ಬುದ್ಧಿವಂತ ಜನರು ಪ್ರೀತಿ ಮಾಡುತ್ತಾರೆ. ಆದರೆ ಮೂರ್ಖರು ಮಾತ್ರ ಮದುವೆಯಾಗುತ್ತಾರೆ. ಆ ಮದುವೆ ಬಂಧನದಿಂದ ವಿಮೋಚನೆ ಪಡೆಯುವ ವೇಳೆಯನ್ನು ಸಂಗೀತದೊಂದಿಗೆ ಖುಷಿಯಾಗಿ ಆಚರಿಸಬೇಕು ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.