ಸಿದ್ದರಾಮಯ್ಯ ವಿರುದ್ಧದ ಹೇಳಿಕೆಯಲ್ಲಿ ದುರುದ್ದೇಶವಿಲ್ಲ; ಸಚಿವ ಅಶ್ವತ್ಥ್ ನಾರಾಯಣ
ಬೆಂಗಳೂರು; ಟಿಪ್ಪು ಸುಲ್ತಾನ್ ರನ್ನು ಹೊಡೆದಾಕಿದಂತೆ ವಿಪಕ್ಷನಾಯಕ ಸಿದ್ದರಾಮಯ್ಯರನ್ನೂ ಹೊಡೆದಾಕಬೇಕು ಎಂದು ಹೇಳಿದ್ದ ಸಚಿವ ಅಶ್ವತ್ಥ್ ನಾರಾಯಣ್, ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಸಾತನೂರಿನಲ್ಲಿ ಅಶ್ವತ್ಥ್ ನಾರಾಯಣ್ ಮಾಡಿದ ಭಾಷಣದಿಂದಾಗಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅದಕ್ಕೆ ಸಮಜಾಯಿಷಿ ನೀಡಿ, ಜಾರಿಕೊಳ್ಳಲು ಸಚಿವ ಅಶ್ವತ್ಥನಾರಾಯಣ ಪ್ರಯತ್ನಿಸಿದ್ದಾರೆ.
ಈ ಬಗ್ಗೆ ಸಚಿವ ಅಶ್ವತ್ಥನಾರಾಯಣ್ ಟ್ವೀಟ್ ಮಾಡಿದ್ದಾರೆ. ಟಿಪ್ಪುಗೆ ಸಿದ್ದರಾಮಯ್ಯ ಅವರನ್ನ ಹೋಲಿಕೆ ಮಾಡಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ. ರಾಜಕೀಯದಲ್ಲಿ ವಾಗ್ದಾಳಿ ಒಂದು ಅವಿಭಾಜ್ಯ ಅಂಗವಾಗಿದೆ. ನಾನು ಆಡಿರುವ ಮಾತುಗಳನ್ನ ರಾಜಕೀಯ ಚೌಕಟ್ಟಿನಲ್ಲೆ ನೋಡಬೇಕು. ಇದು ಆರೋಗ್ಯಕರ ಪ್ರಜಾತಂತ್ರಕ್ಕೆ ಅಗತ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ.
ಮಂಡ್ಯದ ಸಾತನೂರಿನಲ್ಲಿ ಟಿಪ್ಪು ಹೊಡೆದುಹಾಕಿದಂತೆ ಸಿದ್ದರಾಮಯ್ಯನವರನ್ನೂ ಹೊಡೆದುಹಾಕಬೇಕು ಎಂದು ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡಿ ಸಚಿವ ಅಶ್ವತ್ಥ ನಾರಾಯಣ ವಿವಾದಕ್ಕೆ ಕಾರಣವಾಗಿದ್ದರು.