ಕಾರ್ಮಿಕನ ಬೆತ್ತಲೆ ಮಾಡಿ ಥಳಿಸಿದ ಹಾಸಿಗೆ ವ್ಯಾಪಾರಿ!
ಬೆಂಗಳೂರು; ಹಾಸಿಗೆ ವ್ಯಾಪಾರಿಯೊಬ್ಬ ತನ್ನ ಅಂಗಡಿಯಲ್ಲಿ ಕೆಲಸಕ್ಕಿದ್ದ ಕಾರ್ಮಿಕನ ಬಟ್ಟೆ ಬಿಚ್ಚಿ ಮನಬಂದಂತೆ ಥಳಿಸಿರುವ ದಾರುಣ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.. ಬೆಂಗಳೂರಿನ ಸುಬ್ರಹ್ಮಣ್ಯಪುರದ ಉತ್ತರಹಳ್ಳಿ ಬಳಿ ಇರುವ ಹಾಸಿಗೆ ಅಂಗಡಿಯಲ್ಲಿ ಈ ಕೃತ್ಯ ಎಸಗಲಾಗಿದೆ.. ಕಾರ್ಮಿಕ ಯುವಕನನ್ನು ಬೆತ್ತಲೆ ಮಾಡಿ ಥಳಿಸಿದ್ದಲ್ಲದೆ ಅದನ್ನು ವಿಡಿಯೋ ಕೂಡಾ ಮಾಡಿಕೊಳ್ಳಲಾಗಿದೆ..
ಇದನ್ನೂ ಓದಿ; ಪೋಷಕರೇ ಬಾಲಕಿಯನ್ನು ಕೊಂದು ಸುಟ್ಟು ಭಸ್ಮ ಮಾಡಿದರು..!
ಹಾಸಿಗೆ ವ್ಯಾಪಾರ ಮಾಡುವ ಶೇಕ್ಷವಾಲಾ ಎಂಬಾತನೇ ಈ ಕತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.. ಆಂಧ್ರಪದೇಶ ಮೂಲದ ಶರೀಫ್ ಎಂಬಾತ ಈ ಅಂಗಡಿಯಲ್ಲಿ ಕೆಲಸಕ್ಕಿದ್ದ.. ಆದ್ರೆ ಹೆಚ್ಚು ದುಡಿಸಿಕೊಂಡು ಕಡಿಮೆ ಸಂಬಳ ಕೊಡುತ್ತಿದ್ದ.. ಹೀಗಾಗಿ ಶರೀಫ್ ಇತ್ತೀಚೆಗೆ ಕೆಲಸ ಬಿಟ್ಟು ಬೇರೆ ಅಂಗಡಿ ಸೇರಿಕೊಂಡಿದ್ದ.. ಹೀಗಾಗಿ ಆರೋಪಿ ಶೇಕ್ಷವಾಲಾ ಸಂಬಳ ಕೊಡುತ್ತೇನೆ ಬಾ ಎಂದು ಕರೆಸಿಕೊಂಡು ಅಮಾನವೀಯವಾಗಿ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ..
ಇದನ್ನೂ ಓದಿ; ಆಸ್ತಿಗಾಗಿ ತಂದೆಯನ್ನೇ ಕೊಚ್ಚಿ ಕೊಲೆ ಮಾಡಿದ ಮಗ!
ಶೇಕ್ಷವಾಲ ಅಂಗಡಿಯ ಶೆಟರ್ ಮುಚ್ಚಿ ಶರೀಫ್‌ನನ್ನು ಕೋಲಿನಿಂದ ಹಲ್ಲೆ ಮಾಡಿದ್ದಾನೆ.. ಅಲ್ಲದೆ ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾನೆ.. ವಿಡಿಯೋ ಚಿತ್ರೀಕರಣ ಕೂಡಾ ಮಾಡಲಾಗಿದೆ.. ಈ ಬಗ್ಗೆ ಮಾಹಿತಿ ಅರಿತ ಸಾಮಾಜಿಕ ಕಾರ್ಯಕರ್ತ ಲಕ್ಷ್ಮೀನಾರಾಯಣ್ ಶರೀಫ್ ನೆರವಿಗೆ ಬಂದಿದ್ದರು.. ಆದ್ರೆ ಪೊಲೀಸರಿಗೆ ದೂರು ಕೊಡುವ ಮೊದಲೇ ಶೇಕ್ಷವಾಲಾನೇ ಶರೀಫ್ ವಿರುದ್ಧ ದೂರು ಕೊಟ್ಟಿದ್ದ ಎನ್ನಲಾಗಿದೆ.. ಇದೀಗ ವಿಡಿಯೋವನ್ನು ಪೊಲೀಸರಿಗೆ ತಲುಪಿಸಲಾಗಿದ್ದು, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ..