ಕುಡಿಯುವ ನೀರಿನ ಟ್ಯಾಂಕರ್‌ನಲ್ಲಿತ್ತು 25 ವರ್ಷದ ಮಹಿಳೆಯ ಮೃತದೇಹ!
ಪುಣೆ; ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕರ್‌ನ ಟ್ಯಾಂಕ್‌ನಲ್ಲಿ 25 ವರ್ಷದ ಮಹಿಳೆಯ ಮತದೇಹ ಪತ್ತೆಯಾಗಿದೆ.. ಅದರಲ್ಲೇ ನೀರು ತುಂಬಿಸಿಕೊಂಡು ಬಂದು ಪೂರೈಕೆ ಮಾಡಲಾಗಿದೆ.. ನೀರು ತುಂಬಿಸಿಕೊಂಡು ಹೋದ ಜನ ಆ ನೀರನ್ನು ಸೇವನೆ ಕೂಡಾ ಮಾಡಿದ್ದು, ಈ ತೀವ್ರ ಆತಂಕ್ಕೊಳಗಾಗಿದ್ದಾರೆ.. ಮಹಾರಾಷ್ಟ್ರದ ಪುಣೆ ನಗರದ ಪುರ್ಸುಂಗಿ ಪ್ರದೇಶದಲ್ಲಿ ಘಟನೆ ನಡೆದಿದೆ..
ಪುಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ.. ಈ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ.. ಅದೇ ರೀತಿ ಪುಣೆಯ ಪುರ್ಸುಂಗಿ ಪ್ರದೇಶದಲ್ಲಿ ನೀರು ಪೂರೈಕೆ ಮಾಡಲಾಗುತ್ತಿತ್ತು.. ಸ್ಥಳೀಯರು ಒಂದಷ್ಟು ಜನ ನೀರು ತುಂಬಿಸಿಕೊಂಡು ಹೋಗಿ ಅದರ ಬಳಕೆ ಕೂಡಾ ಶುರು ಮಾಡಿದ್ದರು.. ಆದ್ರೆ, ಟ್ಯಾಂಕ್‌ನಲ್ಲಿ ಅರ್ಧಕ್ಕೂ ಹೆಚ್ಚು ನೀರಿದ್ದರೂ ಕೂಡಾ ಪೈಪ್‌ನಿಂದ ನೀರು ಬರೋದು ಇದ್ದಕ್ಕಿದ್ದಂತೆ ಬ್ಲಾಕ್ ಆಗಿತ್ತು.. ಏನಾಗಿದೆ ಎಂದು ನೋಡಿದರೆ ಪೈಪ್‌ನಲ್ಲಿ ಸೀರೆಯೊಂದು ಸಿಲುಕಿ ಬ್ಲಾಕ್ ಆಗಿರುವುದು ಪತ್ತೆಯಾಗಿತ್ತು… ಟ್ಯಾಂಕ್ ಮೇಲೆ ಹತ್ತಿ ಪರಿಶೀಲನೆ ಮಾಡಿದಾಗ ಅದರಲ್ಲಿ ಮಹಿಳೆಯ ಮೃತದೇಹ ಇರುವುದು ಕಂಡುಬಂದಿದೆ..
ಮೃತ ಮಹಿಳೆ ಮೂಲತಃ ಉತ್ತರ ಪ್ರದೇಶ ಮೂಲದವಳಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಹಂಡೆವಾಡಿ ಜೆಎಸ್‌ಪಿಎಂ ಕಾಲೇಜು ಬಳಿಯ ಕಟ್ಟಡವೊಂದರ ಬಾಡಿಗೆ ಮನೆಯಲ್ಲಿ ವಾಸವಿದ್ದಳು.. ತಿಂಗಳ ಹಿಂದಷ್ಟೇ ಆಕೆ ಪುಣೆಗೆ ಬಂದಿದ್ದಳು ಎಂದು ತಿಳಿದುಬಂದಿದೆ.. ಇನ್ನು ಮಹಿಳೆ ವಾಸಿಸುವ ಕಟ್ಟಡದಲ್ಲೇ ಟ್ಯಾಂಕರ್ ಡ್ರೈವರ್ ಕೂಡಾ ವಾಸವಿದ್ದಾನೆ.. ರಾತ್ರಿ ಕಟ್ಟಡದ ಹತ್ತಿರವೇ ಟ್ಯಾಂಕರ್ ನಿಲ್ಲಿಸಲಾಗಿದೆ.. ಈ ವೇಳೆ ಏನೋ ಅನಾಹುತ ನಡೆದಿದೆ..
ಮೇಲ್ನೋಟಕ್ಕೆ ನೋಡಿದರೆ ಮಹಿಳೆಯ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ.. ಹೀಗಾಗಿ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ..