BengaluruScience

ಸೂರ್ಯನ ಅಧ್ಯಯನಕ್ಕೆ ಮುಂದಾದ ಇಸ್ರೋ; Aditya L1 ಉಡಾವಣೆಗೆ ದಿನಾಂಕ ಫಿಕ್ಸ್‌

ನವದೆಹಲಿ; ಚಂದ್ರಯಾನ-೩ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಇಸ್ರೋ ವಿಜ್ಞಾನಿಗಳು ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಸೂರ್ಯನ ಅಧ್ಯನಕ್ಕೆ ಇಸ್ರೋ ಮುಂದಾಗಿದ್ದು, ಅದಕ್ಕಾಗಿ ಮುಹೂರ್ತ ಕೂಡಾ ಫಿಕ್ಸ್‌ ಮಾಡಿದ್ದಾರೆ. ಸೆಪ್ಟೆಂಬರ್ 2 ರಂದು ಬೆಳಗ್ಗೆ 11:50ಕ್ಕೆ Aditya L1 ಅನ್ನು ಉಡಾವಣೆ ಮಾಡಲು ಇಸ್ರೋ ವಿಜ್ಞಾನಿಗಳು ನಿರ್ಧಾರ ಮಾಡಿದ್ದಾರೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ರಾಕೆಟ್ ಅನ್ನು ಸೆಪ್ಟೆಂಬರ್‌ 2 ರಂದು ಉಡಾವಣೆ ಮಾಡಲಾಗುತ್ತದೆ. ಆದಿತ್ಯ-L1’ ಬಾಹ್ಯಾಕಾಶ ನೌಕೆಯನ್ನು ಎರಡು ವಾರದ ಹಿಂದೆಯೇ ಶ್ರೀಹರಿಕೋಟಾಕ್ಕೆ ಕಳುಹಿಸಲಾಗಿದೆ. ಇದೀಗ ಇಡಾವಣೆಗೆ ಅಂತಿಮ ಹಂತದ ತಯಾರಿಗಳು ನಡೀತಾ ಇವೆ. ಆದಿತ್ಯ-L1 ಭೂಮಿಯಿಂದ ಸುಮಾರು 15 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿ ಸೂರ್ಯನ ಹೊರಗಿನ ಪದರಗಳು ಹಾಗೂ ಇತರ ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡಲಿದೆ.

Share Post