Bengaluru

ಐಪಿಎಸ್‌ ಅಧಿಕಾರಿ ರೂಪ ಮೌದ್ಗಿಲ್‌ 20 ವರ್ಷಗಳಲ್ಲಿ 40 ಬಾರಿ ವರ್ಗಾವಣೆ..!

(ಮಂಜುನಾಥ್‌ ಗರಗ)

ಬೆಂಗಳೂರು; ಹಿರಿಯ ರಾಜ್ಯದ ಹಿರಿಯ ಐಪಿಸ್‌ ಅಧಿಕಾರಿ ರೂಪ ಮೌದ್ಗಿಲ್‌ ಈಗ ಬಹಳಾ ಚಚೆ೯ಯಲ್ಲಿರುವ ಹೆಸರು. ಹಿರಿಯ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ನೇರವಾಗಿ ಅವರ ವೈಯಕ್ತಿಕ ಹಾಗು ವೃತ್ತಿ ಜೀವನದ ಬಗ್ಗೆ ಪ್ರೆಶ್ನಿಸಿದ್ದರು, ಈ ವಿಚಾರವಾಗಿ ಇಬ್ಬರು ಹಿರಿಯ ಅಧಿಕಾರಿಗಳಿಬ್ಬರು ಜಗಳ ಬಿದೀರಂಪಾಟವಟಗಿದೆ, ಇಬ್ಬರು ಅಧಿಕಾರಿಗಳು ಒಬ್ಬರಮೇಲೆ ಒಬ್ಬರು ಸಕಾ೯ರದ ಕಾಯ೯ದಶಿ೯ಗಳಿಗೆ ದೂರು ನೀಡಿದ್ದಾರೆ. ಇದರಿಂದ ರಾಜ್ಯ ಸಕಾ೯ರ ಬಹಳ ಮುಜುಗಕ್ಕೊಳಗಿದ್ದು ಈ ಇಬ್ಬರು ಅಧಿಕಾರಿಗಳಿಗೆ ನೋಟೀಸ್‌ ಜಾರಿ ಮಾಡಿದೆ.

ಐಪಿಸ್‌ ಅಧಿಕಾರಿ ರೂಪ ಮೌದ್ಗಿಲ್‌ ನೋಟಿಸ್‌ ಮಡೆದಿರುವುದು ಇದೇ ಮೊದಲ ಬಾರಿಯೇನಲ್ಲ. ಇವರು 20 ವರ್ಷಗಳಲ್ಲಿ 40 ಬಾರಿ ವರ್ಗಾವಣೆ ಯಾಗಿದ್ದಾರೆ ಈ ಹಿಂದೆಯೂ ಕೂಡ ಹಿರಿಯ ಐಪಿಸ್‌ ಅಧಿಕಾರಿಯೊಂದಿಗೆ ಸಮರಸಾರಿದ್ದರು. ಸದ್ಯ ಅವರು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ. ಮೋಲತಹ ದಾವಣೆಗೆರೆಯವರಾದ ರೂಪಾ ಮೌದ್ಗಿಲ್ 2000ನೇ ಇಸ್ವಿಯ ಬ್ಯಾಚ್ನ ಐಪಿಎಸ್ ಅಧಿಕಾರಿ, ಇವರು ಯುಪಿಎಸ್ಸಿ ಪರೀಕ್ಷೆಯಲ್ಲಿ 43ನೇ ರ‍್ಯಾಂಕ್ ಗಳಿಸಿರುತ್ತಾರೆ. ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ನಂತರ ಕರ್ನಾಟಕ ಕೇಡರ್ನ ಅಧಿಕಾರಿಯಾಗಿ ತಮ್ಮ ವೃತ್ತಿ ಆರಂಭಿಸಿದರು. ರೂಪಾ ಅವರನ್ನು ಉತ್ತರ ಕರ್ನಾಟಕದ ಧಾರವಾಡ,ಗದಗ ,ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪೋಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆಸಲ್ಲಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2007ರಲ್ಲಿ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಅವರನ್ನು ಬಂಧಿಸಿದ್ದರು. 2013ರಲ್ಲಿ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಧಿಕಾರ ಸ್ವೀಕಾರಮಾಡುವದರೊಂದಿಗೆ ಇವರು ಇಲಾಖೆಯಲ್ಲಿ ದೇಶದ ಮೊದಲ ಮಹಿಳಾ ಪೊಲೀಸ್ ಅಧಿಕಾರಿಯಾಗಿಯೂ ಗುರುತಿಸಿಕೊಂಡರು.2017ರ ಜೂನ್ನಲ್ಲಿ ಬಂದೀಖಾನೆ ಡಿಐಜಿಪಿಯಾಗಿ ಅಧಿಕಾರ ವಹಿಸಿಕೊಂಡ ಸಮಯದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾರವರ ಆಪ್ತೆ ಶಶಿಕಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿಇರುವಾಗ ಅವರಿಗೆ ಕಾನೂನುಬಾಹಿರವಾಗಿ ಸವಲತ್ತುಗಳನ್ನು ನೀಡುತ್ತಿರುವ ಬಗ್ಗೆ ಬಹಿರಂಗವಾಗಿ ಹೇಳಿದ್ದರು.ನಂತರ ಅವರನ್ನು ಅಲ್ಲಿಂದ ರಸ್ತೆ ಸುರಕ್ಷತೆ ಆಯುಕ್ತರ ಹುದ್ದೆಗೆ ವರ್ಗಾವಣೆಯಾಗಿದ್ದರು. ಇನ್ನು 2020ರಲ್ಲಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ (ಆಡಳಿತ) ಆಗಿದ್ದ ಹೇಮಂತ್ ನಿಂಬಾಳ್ಕರ್ ವಿರುದ್ಧ 612 ಕೋಟಿ ರೂ. ವೆಚ್ಚದ ‘ಸುರಕ್ಷ ನಗರ’ ಯೋಜನೆ ಟೆಂಡರ್ ವಿಚಾರದಲ್ಲಿ ರೂಪಾ ಅಕ್ರಮದ ಆರೋಪ ಮಾಡಿದ್ದರು ಇದು ಬಹಳ ಚರ್ಚೆಯಗಿತ್ತು. ನಂತರ ಸಕಾ೯ರ ಇಬ್ಬರನ್ನೂ ವರ್ಗಾವಣೆ ಮಾಡಿತ್ತು. ಸದ್ಯ ರೂಪಾ ಅವರು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Share Post