BengaluruCrime

ಡಿ.ರೂಪಾ ಹಾಗೂ ರೋಹಿಣಿಗೆ ನೋಟಿಸ್‌ ಜಾರಿ

ಬೆಂಗಳೂರು; ರೋಹಿಣಿ ಸಿಂಧೂರಿ,ಡಿ.ರೂಪ ಬೀದಿ ರಂಪಾಟ ವಿಚಾರವಾಗಿ, ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ ರೂಪಾ ರವರಿಗೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.
ಡಿ ರೂಪಾರವರಿಗೆ ನೀವು ಇನ್ನೊಬ್ಬ ಸರ್ಕಾರಿ ನೌಕರನ ವಿರುದ್ಧ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳನ್ನು ಬಳಸಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ನಿಮ್ಮ ಆಪಾದನೆ/ ಕುಂದುಕೊರತೆಗಳನ್ನು ಎತ್ತಲು ಸೂಕ್ತ ವೇದಿಕೆ ಇದ್ದರೂ ಅದನ್ನ ನೇರವಾಗಿ ಮಾಧ್ಯಮಗಳಿಗೆ ವ್ಯಕ್ತಪಡಿಸಿದ್ದೀರಿ. ಇದರಿಂದ ಸರ್ಕಾರಕ್ಕೆ ಅಪಖ್ಯಾತಿ ಹಾಗೂ ಮುಜುಗರ ಉಂಟಾಗುವ ಸಾಧ್ಯತೆ ಇದೆ. ಇದು ಅಖಿಲ ಭಾರತ ಸೇವಾ (ನಡತೆ) ನಿಯಮಗಳು ಮತ್ತು ಈ ಸಂಬಂಧ ಹೊರಡಿಸಿದ 18/9/2021 ರ ಸುತ್ತೋಲೆ ಸಂಖ್ಯೆ: e-DPAR 228 SAS 2021 ರ ಮನೋಭಾವಕ್ಕೆ ವಿರುದ್ಧವಾಗಿದೆ, ಸರ್ಕಾರಿ ಯೋಜನೆಗಳು ಅಥವಾ ಅಧಿಕೃತ ಪ್ರಸರಣಕ್ಕೆ ಸಂಬಂಧಿಸಿದಂತೆ ತಮ್ಮ ಅಧಿಕೃತ ಕರ್ತವ್ಯಗಳ ನಿರ್ವಹಣೆಯಲ್ಲಿ ಅಗತ್ಯವಿದ್ದಲ್ಲಿ ಮಾತ್ರ ಮಾಧ್ಯಮಗಳಲ್ಲಿ ನಿಮ್ಮ ಅಭಿಪ್ರಾಯ ವ್ಯಕ್ತ ಪಡಿಸ ಬೇಕು. ಕುಂದುಕೊರತೆ/ಆಪಾದನೆಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳನ್ನ ಅಧಿಕೃತವಾಗಿ ಬಳಸುವಹಾಗಿಲ್ಲ. ಆದ್ದರಿಂದ ಮುಂದೆ ಅಂತಹ ಯಾವುದೇ ವಿಷಯಗಳ ಬಗ್ಗೆ ಮಾಧ್ಯಮವನ್ನು ಸಂಪರ್ಕಿಸುವುದನ್ನು ತಡೆಯಲು ಮತ್ತು ಅಖಿಲ ಭಾರತ ಸೇವೆಗಳ (ನಡತೆ) ನಿಯಮಗಳು ಮತ್ತು ಮೇಲೆ ಉಲ್ಲೇಖಿಸಿದ ಸುತ್ತೋಲೆಯ ವಿಷಯಗಳನ್ನು ಅದರ ನಿಜವಾದ ಸ್ಪೂರ್ತಿಯಲ್ಲಿ ಅನುಸರಿಸಲು ನಿಮಗೆ ನಿರ್ದೇಶಿಸಲಾಗಿದೆ. ಎಂದು ರಾಜ್ಯ ಸರ್ಕಾರ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ.

Share Post