BengaluruPolitics

ಕಾಂಗ್ರೆಸ್‌ ಲಿಸ್ಟ್‌ ಬಿಡುಗಡೆಗೆ ವಿಳಂಬ ಯಾಕೆ..?; ಸಿದ್ದು ಕ್ಷೇತ್ರ ವಿಚಾರವೇ ಕಾರಣವಾ..?

ಬೆಂಗಳೂರು;  135 ಕ್ಷೇತ್ರಗಳಿಗೆ ಕಾಂಗ್ರೆಸ್‌ ಪಟ್ಟಿ ರೆಡಿಯಾಗಿದ್ದು, ಯುಗಾದಿಯಂದು ಬಿಡುಗಡೆಯಾಗುತ್ತೆ ಎಂದು ಹೇಳಲಾಗಿತ್ತು. ಆದ್ರೆ ಯುಗಾದಿ ಮುಗಿದೇ ಹೋಯ್ತು ಆದ್ರೂ ಆ ಬಗ್ಗೆ ಇನ್ನೂ ಯಾವ ಸುದ್ದಿಯೂ ಇಲ್ಲ. ಪಟ್ಟಿ ರೆಡಿಯಾಗಿದ್ದರೂ, ಅದನ್ನು ರಿಲೀಸ್‌ ಮಾಡದೇ ಇರೋದಕ್ಕೆ ಕಾರಣ ಏನು ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸಿದ್ದರಾಮಯ್ಯ ಅವರು ಕ್ಷೇತ್ರ ಆಯ್ಕೆ ಮಾಡಿಕೊಳ್ಳದ ಕಾರಣದಿಂದಲೇ ಮೊದಲ ಪಟ್ಟಿ ಬಿಡುಗಡೆಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಆದ್ರೆ ಅಲ್ಲಿ ಗೆಲ್ಲೋದು ಕಷ್ಟವಾಗುತ್ತೆ, ಬೇರೆ ಕ್ಷೇತ್ರ ನೋಡಿ ಎಂದು ಹೈಕಮಾಂಡ್‌ ಸಲಹೆ ನೀಡಿದೆ. ಈ ನಡುವೆ ಸಿದ್ದರಾಮಯ್ಯ ಗೊಂದಲಕ್ಕೆ ಬಿದ್ದಿದ್ದಾರೆ. ಅವರ ಮುಂದಿರುವ ಆಯ್ಕೆ ವರುಣಾ ಕ್ಷೇತ್ರವಾದರೂ ಮಗನಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬುದು ಸಿದ್ದರಾಮಯ್ಯ ಅವರ ಅಭಿಪ್ರಾಯ. ಹೀಗಾಗಿ ಬೇರೆ ಯಾವುದಾದರೂ ಕ್ಷೇತ್ರದಲ್ಲಿ ನಿಲ್ಲಬಹುದಾ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಬಾರಿಯೂ ಬದಾಮಿಯಲ್ಲೇ ನಿಂತರೆ ಹೇಗೆ ಎಂಬ ಲೆಕ್ಕಾಚಾರವೂ ಅವರದ್ದಾಗಿದೆ.

ಸಿದ್ದರಾಮಯ್ಯ ಅವರು ಕ್ಷೇತ್ರ ಬದಲಾವಣೆ ಮಾಡುತ್ತೇನೆ ಎಂದಾಗಿ ಬದಾಮಿ ಜನರು ಬೆಂಗಳೂರಿಗೆ ಬಂದು ಬದಾಮಿಯಲ್ಲೇ ನಿಲ್ಲುವಂತೆ ಒತ್ತಡ ಹೇರಿದ್ದರು. ಆದರೂ ಸಿದ್ದರಾಮಯ್ಯ ಅವರು ಬದಾಮಿ ದೂರ ಆಗುತ್ತೆ. ಓಡಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿ, ಕೋಲಾರ ಆಯ್ಕೆ ಮಾಡಿಕೊಂಡಿದ್ದರು. ಆದ್ರೆ ಈಗ ಅವರ ಮನಸ್ಸು ಬದಲಿಸಿದ್ದಾರೆ. ಆದ್ರೆ ಕ್ಷೇತ್ರ ಆಯ್ಕೆಯಲ್ಲಿ ಅವರಿಗೆ ಗೊಂದಲವಿದೆ. ಅವರ ಮನಸ್ಸಿನಲ್ಲಿ ಕುಷ್ಟಗಿ ಕ್ಷೇತ್ರ ಕೂಡಾ ಇದೆ. ಆದ್ರೆ ಸಿದ್ದರಾಮಯ್ಯ ಯಾವುದನ್ನೂ ಅಂತಿಮ ಮಾಡಿಲ್ಲ. ಈ ನಡುವೆ ಬದಾಮಿಯಲ್ಲಿ ರೋಡ್‌ ಶೋ ನಡೆಸಲು ಮುಂದಾಗಿದ್ದಾರೆ. ನಾಳೆ ಅವರು ಎರಡು ಕಿಲೋ ಮೀಟರ್‌ ರೋಡ್‌ ಶೋ ಮಾಡಲಿದ್ದಾರೆ.

ಮೊದಲ ಪಟ್ಟಿಯಲ್ಲಿ ಹಿರಿಯರಿಗೆಲ್ಲಾ ಟಿಕೆಟ್‌ ಅನೌನ್ಸ್‌ ಮಡಲಾಗುತ್ತೆ. ಆದ್ರೆ ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆ ಆಗಿಲ್ಲ. ಹೀಗಾಗಿ ಸಿದ್ದರಾಮಯ್ಯ ಹೆಸರನ್ನು ಬಿಟ್ಟು ಮೊದಲ ಪಟ್ಟಿ ಬಿಡುಗಡೆ ಮಾಡೋಕೆ ಕಷ್ಟ. ಹೀಗಾಗಿಯೇ ಸಿದ್ದರಾಮಯ್ಯ ಅವರ ನಿರ್ಧಾರಕ್ಕಾ ಹೈಕಮಾಂಡ್‌ ಕಾಯುತ್ತಿದೆ ಎಂದು ಹೇಳಲಾಗುತ್ತಿದೆ.

Share Post