ಚೀನಾದ ಪ್ರಮುಖ ಪ್ರಾಂತ್ಯದಲ್ಲಿಯೂ ಲಾಕ್‌ಡೌನ್ ಜಾರಿ
ಬಿಜಿಂಗ್ : ಚೀನಾದಲ್ಲಿಯೂ ಕೊರೊನಾ ಮತ್ತೆ ರಣಕೇಕೆ ಹಾಕುವ ಸೂಚನೆಗಳು ಸಿಕ್ಕಿವೆ. ಜನವರಿ ೨ ರಂದು 161 ಕೋವಿಡ್ ಕೇಸ್ ವರದಿಯಾಗಿದೆ. ಕಳೆದ ನಾಲ್ಕೂವರೆ ತಿಂಗಳಿನಲ್ಲಿಯೇ ಇದು ಅಧಿಕ ಕೇಸ್‌ಗಳಾಗಿದೆ ಎಂದು ಆರೋಗ್ಯ ಸಂಸ್ಥೆ ತಿಳಿಸಿದೆ.
ಚೀನಾದ ವಾಯುವ್ಯ ಪ್ರಾಂತ್ಯದ ಶಾಂಕ್ಷಿಯಲ್ಲಿ ಅಧಿಕ ಪ್ರಮಾಣದಲ್ಲಿ ಸೋಂಕು ಉಲ್ಬಣವಾಗುತ್ತಿದೆ. ಶಾಂಕ್ಷಿ ರಾಜಧಾನಿ ಕ್ಷಿಯಾನ್ ಅನ್ನು ಲಾಕ್‌ಡೌನ್ ಮಾಡಲಾಗಿದ್ದು ಜೆಜಿಯಾಂಗ್ ಪ್ರಾಂತ್ಯದಲ್ಲಿ ಕೂಡ ಪ್ರಕರಣಗಳು ಹೆಚ್ಚಾಗುತ್ತಿವೆ.
ಚೀನಾ ಶೂನ್ಯ ಕೋವಿಡ್ ನಿಯಮ ಪಾಲಿಸುತ್ತಿದೆ. ಹೀಗಾದರೂ, 161 ಪ್ರಕರಣಗಳು ದಾಖಲಾಗಿರುವುದು ಸಹಜವಾಗಿಯೇ ಆತಂಕ ಪಡುವಂತೆ ಮಾಡಿದೆ.