BengaluruCrime

ಐಟಿ ದಾಳಿ ಆಯ್ತು ಈಗ ಇಡಿ ದಾಳಿ; ಉದ್ಯಮಿಯೊಬ್ಬರ ಮನೆಯಲ್ಲಿ ಶೋಧ

ಬೆಂಗಳೂರು; ಕಳೆದ ಕೆಲ ದಿನಗಳಿಂದ ಐಟಿ ಇಲಾಖೆ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಾ ಬಂದಿದ್ದರು. ಉದ್ಯಮಿಗಳು, ವ್ಯಾಪಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನೂರು ಕೋಟಿ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿತ್ತು. ಇದೀಗ ಇಡಿ ಅಧಿಕಾರಿಗಳ ಸರದಿ. ಇಂದು ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಉದ್ಯಮಿಯೊಬ್ಬರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಕಸವಿನಹಳ್ಳಿ ಬಳಿ ಇರುವ ಉದ್ಯಮಿ ಉಷಾ ರಾಮನಾನಿ ಮನೆಯಲ್ಲಿ ಈ ದಾಳಿ ನಡೆಸಲಾಗಿದೆ. ಈ ಉದ್ಯಮಿ  ಎರಡು ಕಂಪನಿಗಳ ಎಂಡಿ ಹಾಗೂ ಡೈರೆಕ್ಟರ್‌ ಆಗಿದ್ದಾರೆ. ಕಂಪನಿಗಳ ಕಚೇರಿಗಳಲ್ಲೂ ಪರಿಶೀಲನೆ ನಡೆಯುತ್ತಿದೆ. ಎಂಟು ಕಾರುಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ಏಕಕಾಲದಲ್ಲಿ ಎಲ್ಲಾ ಕಡೆ ದಾಳಿ ಮಾಡಿದ್ದಾರೆ.

 

Share Post