Bengaluru

ಸವಾಲೆಸೆದ್ರೆ ಭಯಪಡುವವರು ಯಾರೂ ಇಲ್ಲ:ಆರಗ ಜ್ಞಾನೇಂದ್ರ

ಬೆಂಗಳೂರು: ನಾಳೆ ನಡೆಯಲಿರುವ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಇಂದು ಕಾಂಗ್ರೆಸ್‌ ಶಾಸಕಾಂಗ ಸಭೆ ನಡೆಸಲಿದೆ. ದೊಡ್ಡಆಲದಹಳ್ಳಿಯಲ್ಲಿ ಪಾದಯಾತ್ರೆ ಕ್ಲೈಮಾಕ್ಸ್‌ ಸಭೆ ಮಾಡುವುದಾಗಿ ಕಾಂಗ್ರೆಸ್‌ ನಾಯಕರು ತಿಳಿಸಿದ್ದಾರೆ. ನಾಳಿನ ಯೋಜನೆಗೆ ಸಂಬಂಧಿಸಿದ ಕೆಲವು ಕೊನೆಯ ರೂಪುರೇಷೆಗಳು ಅಥವಾ ಬಿಜೆಪಿ ಸರ್ಕಾರದ ಕಾನೂನು ಕ್ರಮಗಳನ್ನು ಎದುರಿಸುವ ಸಲುವಾಗಿ ಕೈ ನಾಯಕರು ಇಂದು ಸಭೆ ನಡೆಸಿ ತೀರ್ಮಾನ ಮಾಡಲಿದ್ದಾರೆ.

ಕೈ ನಾಯಕರ  ಸಭೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಸಭೆ ಸಮಾರಂಭ, ಪಾದಯಾತ್ರೆ ನಡೆಸೋದು ತಪ್ಪು. 144ಸೆಕ್ಷನ್‌ ಉಲ್ಲಂಘನೆ ಆದರೆ ಕಾನೂನು ಕ್ರಮ ಜರುಗಿಸುವುದು ಗ್ಯಾರೆಂಟಿ ಎಂದು ಖಡಕ್‌ ಆಗಿ ಉತ್ತರ ಕೊಟ್ಟಿದ್ದಾರೆ. ನಾವು ಅವರ ಪಾದಯಾತ್ರೆ ತಪ್ಪು ಅಂತ ಹೇಳ್ತಿಲ್ಲ, ಕೊರೊನಾ ಸಮಯದಲ್ಲಿ ಈ ನಿರ್ಧಾರ ಬೇಡ ಎನ್ನುತ್ತಿದ್ದೇವೆ. ಅದನ್ನು ಅವರು ಅರ್ಥಮಾಡಿಕೊಳ್ಳದೆ ತೊಡೆ ತಟ್ಟಿ ಸವಾಲೆಸೆಯುವುದು ಸರಿನಾ..? ರಾಜ್ಯದ ಜನ ಅವರ ಸವಾಲುಗಳನ್ನು ನೋಡ್ತಿದಾರೆ.

ಮೊದಲು ಮತ್ತು ಎರಡನೇ ಅಲೆಯಲ್ಲಿ ಆದ ಪ್ರಾಣನಷ್ಟದ ಬಗ್ಗೆ ಇವರಿಗೆ ತಿಳಿದು ಹೀಗೆ ನಡೆದುಕೊಂಡರೆ ಅದು ನಮ್ಮ ತಪ್ಪಲ್ಲ. ಇವರಂತೆ ನಾನು ಬೀದಿಯಲ್ಲಿ ನಿಂತು ಕುಸ್ತಿ ಮಾಡಲು ಆಗಲ್ಲ. ತಪ್ಪು ಮಾಡುವವರನ್ನು ಅರೆಸ್ಟ್‌ ಮಾಡಲು ಎದೆಗಾರಿಕೆ ಇರಬೇಕೆಂದೇನಿಲ್ಲ. ಪೊಲೀಸರು ತಮ್ಮ ಕೆಲಸವನ್ನು ತಾವು ಮಾಡುತ್ತಾರೆ. ಸಭೆ ಮಾಡಿದ್ರೆ ೧೪೪ ಉಲ್ಲಂಘನೆ ಮಾಡಿದಂತೆ ಅವರ ಮೇಲೆ ಕಾನೂನು ಕ್ರಮ ಆಗೇ ಆಗುತ್ತೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Share Post