ಹಿಮಪಾತದ ನಡುವೆ ಪ್ರವಾಸಿಗರ ಮಸ್ತಿ; ಹೇಗಿದೆ ನೋಡಿ ಶಿಮ್ಲಾ
ಶಿಮ್ಲಾ: ಹಿಮಾಚಲದಲ್ಲಿ ಭಾರಿ ಹಿಮಪಾತವಾಗುತ್ತಿದೆ. ಇದ್ರಿಂದಾಗಿ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಈ ಕಾರಣದಿಂದಾಗಿ ಕೆಲವೆಡೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಹೀಗಿದ್ದರೂ ಶಿಮ್ಲಾಗೆ ಬರುವ ಪ್ರವಾಸಿಗರ ಸಂಖ್ಯೆಗೇನೂ ಕಡಿಮೆ ಇಲ್ಲ. ನೂರಾರು ಪ್ರವಾಸಿಗರು ಶಿಮ್ಲಾದಲ್ಲಿ ಬೀಡುಬಿಟ್ಟಿದ್ದಾರೆ. ಭೂಮಿ ಮೇಲೆ ಹಾಸುಹೊದ್ದಿರುವ ಹಿಮದಲ್ಲಿ ಆಟವಾಡುತ್ತಿದ್ದಾರೆ.
ಹಿಮದಲ್ಲಿ ಆಟವಾಡುತ್ತಾ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಸ್ವರ್ಗದಲ್ಲೇ ಇರುವಂತೆ ಖುಷಿ ಪಡುತ್ತಿದ್ದಾರೆ. ಅಂದಹಾಗೆ, ಇಂದು ಮತ್ತು ನಾಳೆ ಶಿಮ್ಲಾದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಕಾರಣಕ್ಕೋ ಏನೋ ಇಂದು ಸ್ವಲ್ಪ ಹಿಮ ಕಡಿಮೆ ಬಿದ್ದಿದೆ. ಹೀಗಾಗಿ ಜನರು ಆರಾಮಾಗಿ ಹೊರಗಡೆ ಬರಲು ಸಾಧ್ಯವಾಗಿದೆ. ಬೆಳಗ್ಗೆ ತುಂತುರು ಮಳೆ ಕೂಡಾ ಆಗಿದೆ. ಇದರ ನಡುವೆ ಪ್ರವಾಸಿಗರು ಯಾವುದೇ ಭೀಯಿ ಇಲ್ಲದೆ ಎಂಜಾಯ್ ಮಾಡಿದ್ದಾರೆ.