ಹಿಜಾಬ್ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ-ವಿಸ್ತೃತ ಪೀಠ ರಚನೆ ಬಗ್ಗೆ ಹೈಕೋರ್ಟ್ ಸಿಜೆ ನಿರ್ಧಾರ
ಬೆಂಗಳೂರು: ಹಿಜಾಬ್ ವಿವಾದ ಅರ್ಜಿ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ವಿಸ್ತೃತ ಪೀಠ ರಚನೆ ಮುಖ್ಯ ನ್ಯಾಯಮೂರ್ತಿಗಳು ನಿರ್ಧಾರ ಮಾಡಲಿ. ಈ ಪ್ರಕರಣ ವಿಸ್ತೃತ ಪೀಠದಲ್ಲಿ ವಿಚಾರಣೆಗೆ ಯೋಗ್ಯವಾಗಿದೆ. ಮುಖ್ಯನ್ಯಾಯಮೂರ್ತಿಗಳು ಈ ಬಗ್ಗೆ ವಿವೇಚನೆ ಹೊಂದಿದ್ದಾರೆ. ತಕ್ಷಣವೇ ಸಂಪೂರ್ಣ ಕಡತ ನ್ಯಾಯಾಮೂರ್ತಿಗಳಿಗೆ ಕಳಿಸಿಕೊಡಿ ಎಂದು ಹೈಕೋರ್ಟ್ ರಿಜಿಸ್ಟ್ರಾರ್‌ಗೆ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನಿರ್ದೇಶನ ನೀಡಿದ್ರು.
ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಹೈಕೋರ್ಟ್ ನ್ಯಾಯಮೂರ್ತಿ ಸಮವಸ್ತ್ರ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲು ಸೂಚನೆ ನೀಡಿದ್ದಾರೆ.
ಹೀಕೋರ್ಟ್‌ನಲ್ಲಿ ಇಂದು ನಡೆದ ವಾದ/ಪ್ರತಿವಾದ
ಪ್ರಭುಲಿಂಗ ನಾವದಗಿ:
ನ್ಯಾಯಾಂಗದ ಸೂಕ್ಷ್ಮತೆಯನ್ನು ನಾವು ಪರಿಗಣಿಸುತ್ತೇವೆ ಅಂತಿಮವಾಗಿ ಇದು ನ್ಯಾಯಾಂಗದ ವಿವೇಚನೆಗೆ ಬಿಟ್ಟಿದ್ದು,ಮ ವೈಕಯ್ತಿಕ ಕಾನೂನು ಸಾಂವಿಧಾನಿಕ ಕೋಡ್‌ಗಳ ಬಗ್ಗೆ ನಾವು ಹೆಚ್ಚಿಗೆ ಏನನನೂ ಹೇಳಲ್ಲ. ಮುಂದಿನ ಎರಡು ತಿಂಗಳ ಕಾಲ ಕಡೆ. ಪ್ರತಿಯೋದಮು ಶೈಕ್ಷಣಿಕ ಸಂಸ್ತೆಗೂ ಸ್ವಾತಂತ್ರ್ಯ ಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಮದ್ರಾಸ್, ಬಾಂಬೆ ಹೈಕೋರ್ಟ್ ತೀರ್ಪು ಉಲ್ಲೇಖಸಿದ ವಕೀಲರು. ಹಿಜಾಬ್ ಕಡ್ಡಾಯ ಎಂಬುದಕ್ಕೆ ಸಮರ್ಥ ಆದಾರಗಳಿಲ್ಲ. ಖುರಾನ್ನಲ್ಲಿ ಎರಡು ಸಾಲುಗಳು ಬಿಟ್ಟರೆ ಬೇರೆ ಆಧಾರ ಇಲ್ಲ. ಸರ್ಕಾರ ಆದೇಶದ ಮೂಲಕ ಅಧಿಕಾರ ನೀಡಿದೆ. ಈ ಹಂತದಲ್ಲಿ ಮಧ್ಯಂತರ ಆದೇಶ ನೀಡುವುದು ಸರಿಯಲ್ಲ..ಸಮವಸ್ತ್ರ ವಿಚಾರದಲ್ಲಿ ಸಮಿತಿ ನಿರ್ಧಾರ ಕೈಗೊಳ್ಳಬಹುದು. ಸರ್ಕಾರ ಕಾಲೇಜು ಅಭಿವೃದ್ಧಿ ಸಮಿತಿಗೆ ಅಧಿಕಾರ ನೀಡಿದೆ ಎಂದು ವಾದ ಮಾಡಿದ್ದಾರೆ.
ಮೊಹಮದ್ ತಾಪಿರ್/ಸಂಜಯ್ ಹೆಗ್ಡೆ ವಾದ
ಎರಡು ತಿಂಗಳ ಕಾಲ ಹಿಜಾಬ್ ಧರಿಸಲು ಅನುಮತಿ ನೀಡಿ. ತಕ್ಷಣಕ್ಕೆ ಅನುಮತಿ ನೀಡಿ. ಎರಡು ತಿಂಗಳಷ್ಟೇ ಮಕ್ಕಳಿಗೆ ಶೈಕ್ಷಣಿಕ ವರ್ಷ ಇರುವುದು. ಕರ್ನಾಟಕ ಶಿಕ್ಷಣ ಕಾಯೆಯಡಿ ಸರ್ಕಾರಕ್ಕೆ ಅವಕಾಶವಿಲ್ಲ. ನಾನುನ ಕಾಯ್ದೆ ಹಿಂದೆ ಮುಂದೆ ಎಲ್ಲಾ ಹುಡುಕಿದೆ ಎಲ್ಲೂ ಸರ್ಕಾರಕ್ಕೆ ಸಮವಸ್ತ್ರ ಬಗ್ಗೆ ನಿರ್ದೇಶಿಸಲು ಅಧಿಕಾರ ಇಲ್ಲ. ಮಧ್ಯಂತರ ಆದೇಶ ನೀಡಲು ಅರ್ಜಿದಾರರ ಮನವಿ. ಸಜ್ಜನ್ ಪೂವಯ್ಯ ವಾದಕ್ಕೆ ಸಂಜಯ್ ಹೆಗ್ಡೆ ವಾದ ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲ್ಲ. ಕಾಲೇಜು ಅಭಿವರಧ್ದ ಸಮಿತಿ ಕಥೆ ಹೀಗಾಘಿದೆ. ಧರ್ಮಕ್ಕೆ ಆತ್ಮಸಾಕ್ಷಿ, ಸ್ವಾತಂತ್ರ್ಯ ಇದೆ. ವಿದ್ಯಾರ್ಥಿನಿಯರು ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾರರು. ಮಧ್ಯಂತರ ಆದೇಸ ನೀಡುವಂತೆ ಅರ್ಜಿದಾರರ ಪರ ವಕೀಲರ ಮನವಿ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿನ ಹೊರಗಡೆ ನಿಂತಿದ್ದಾರೆ. ಹಿಜಾಬ್ ಧರಿಸಿ ಕಾಲೇಜಿಗೆ ಹೋಗಲು ಅನುಮತಿ ನೀಡಿ ಎಂದು ಸಂಜಯ್ ಹೆಗ್ಡೆ ವಾದ. ಯೂನಿಫಾರ್ಮ್ ಇಲ್ಲದಿದ್ರೆ ದಂಡ ನಿಗದಿ ಪಡಿಸಿಲ್ಲ ಸಮವಸ್ತ್ರದ ಒಂದು ಭಾಗದ ಬಗ್ಗೆ ಮಾತ್ರ ಆಕ್ಷೇಪವಿದೆ. ಕಾಲೇಜು ನಮ್ಮನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂದು ಮನವಿ ಮಾಡಿದ್ರು.