ಬೇಟಿ ಪಡಾವೋ ಬದಲಿಗೆ ಬೇಟಿ ಹಠಾವೋ..ಮಾಡಲು ಹೊರಟಿದ್ದಾರೆ-ಹೆಚ್‌ಡಿಕೆ
ಬೆಂಗಳೂರು: ಮುಸಲ್ಮಾನ್ ಸಮುದಾಯದಲ್ಲಿ ಕೆಲವು ಸಂಘನೆಗಳು ರಾಜಕೀಯದಲ್ಲಿ ಮೂಗು ತೂರಿಸಿದ್ದಾರೆ. ಮುಸಲ್ಮಾನ್ ಸಮಾಜದಲ್ಲಿ ಇತ್ತೀಚೆಗಷ್ಟೇ ಹೆಣ್ಣುಮಕ್ಕಳು ಶಿಕ್ಷಣ ಕಲಿಯಲು ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಬೇಟಿ ಬಚಾವೋ..ಬೀಟಿ ಪಡಾವೋ ಎಂಬ ಯೋಜನೆ ಮಾಡಿದ್ರು. ಈಗ ಎರಡೂ ಪಕ್ಷಗಳಿಂದ ಬೇಡಿ ಪಡಾವೋ ಅಲ್ಲ ಬೇಟಿ ಹಟಠಾವೋ ಮಾಡಲು ಬಿಜೆಪಿ, ಕಾಂಗ್ರೆಸ್ ಮುಂದಾಗಿದೆ.
ಶಾಲೆಗಳಲ್ಲಿ ಮುಂಚೆ ಹೇಗಿತ್ತೂ ಹಾಗೆ ಯಥಾಸ್ಥಿತಿ ಮುಂದುವರೆದರೆ ಈ ಗೊಂದಲವೇ ಇರುವುದಿಲ್ಲ. ಮಕ್ಕಳಲ್ಲಿ ಹಿಂದೂ..ಮುಸ್ಲಿಂ ಎಂಬ ಭೇದ ಭಾವ ಮಾಡಬೇಡಿ. ಮುಂದಿನ ಚುನಾವಣೆಗಾಗಿ ವಾತಾವರಣ ಹಾಳು ಮಾಡಿ ವೋಟಿಗಾಗಿ ಎಂತಹ ದರಿದ್ರ ರಾಜಕಾರಣ ಮಾಡಲು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿವರೆಗೂ ಕೋವಿಡ್ ಕಾರಣದಿಂದ ಸರಿಯಾಗಿ ಶಾಲೆಗಳನ್ನು ನಡೆಸಿಲ್ಲ.ಈಗ ಈ ವಿಚಾರವನ್ನು ಮುಂದಿಟ್ಟುಕೊಂಡು ಮಕ್ಕಳ ಜೀವನದಲ್ಲಿ ಆಟ ಆಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.