ಹಿಜಾಬ್ ವಿವಾದಕ್ಕೆ ತಾತ್ಕಾಲಿಕ ಪರಿಹಾರ: ಎಸ್‌ಡಿಎಂಸಿ ಸಭೆಯ ತೀರ್ಮಾನವೇನು..?
ಕುಂದಾಪುರ: ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ತಾತ್ಕಾಲಿಕ ಪರಿಹಾರ ಹುಡುಕಲಾಗಿದೆ. ಹಿಜಾಬ್ ವಿಚಾರವೂ ಕೆಲ ದಿನಗಳಿಂದ ಕಾಲೇಜಿನ ಬಳಿ ಗಲಾಟೆಗಳು, ಗೊಂದಲಗಳು ಏರ್ಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕಾಲೇಜಿಗೆ ರಜೆ ನೀಡಿ ಸಭೆ ಕರೆಯಲಾಗಿತ್ತು. ಕಾಲೇಜು ಪ್ರಾಂಶುಪಾಲರು ಹಾಗೂ ಎಸ್‌ಡಿಎಂಸಿ ಸದಸ್ಯರು ಇಂದು ಸಭೆ ನಡೆಸಿದರು. ಸಮಸ್ಯೆಗೆ ಪರಿಹಾರ ಹುಡುಕುವುದು ಈ ಸಭೆಯ ಉದ್ದೇಶವಾಗಿತ್ತು.
ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು. ನಂತರ ಹಿಜಾಬ್ ಹಾಗೂ ಕೇಸರಿ ಶಾಲು ಎರಡನ್ನೂ ಹಾಕಿಕೊಂಡು ಕಾಲೇಜಿಗೆ ಬರಬಹುದು. ಆದ್ರೆ ತರಗತಿಯಲ್ಲಿ ಹಿಜಾಬ್ ಆಗಲೀ, ಕೇಸರಿ ಶಾಲು ಆಗಲೀ ಧರಿಸುವಂತಿಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು.