Bengaluru

ಹೃದಯಾಘಾತದಿಂದ `RJ’.ರಚನಾ ಸಾವು: ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರು

ಬೆಂಗಳೂರು: ರೇಡಿಯೋ ಜಾಕಿ ರಚನಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಫ್ಲಾಟ್‌ನಲ್ಲಿದ್ದಾಗ ಎದೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರಚನಾ ಸ್ನೇಹಿತರು ಪಾರ್ಥಿವ ಶರೀರವನ್ನು ಚಾಮರಾಜಪೇಟೆಯ ನಿವಾಸಕ್ಕೆ ರವಾನಿಸಿದ್ದಾರೆ.
ಮಾತಿನ ಮಲ್ಲಿ ಎಂದೇ ಹೆಸರಾಗಿದ್ದ ಆರ್.ಜೆ.ರಚನಾ ಸಿಂಪಲ್ಲಾಂಗ್‌ ಒಂದ್‌ ಲವ್‌ಸ್ಟೋರಿ ಸಿನಿಮಾದಲ್ಲಿ ನಟಿಸಿದ್ರು. ತಮ್ಮ ಮಾತಿನ ಮೂಲಕ ಜನರ ಮನದೊಳಗೆ ಮನೆ ಮಾಡಿಕೊಂಡಿದ್ದ ರಚನಾ ಮದ್ದು ಮುಖದ ಚೆಲುವೆ ಕೂಡ. ಅಷ್ಟೇ ಅಲ್ಲದೆ ಆರೋಗ್ಯ ವಿಚಾರದಲ್ಲಿ ಸದಾ ಕಾಳಜಿ ತೋರುತ್ತಿದ್ದರು ಎನ್ನಲಾಗಿದೆ. ಸದಾ ಫಿಟ್‌ ಅಂಡ್‌ ಫೈನ್‌ ಆಗಿರುತ್ತಿದ್ದ ರಚನಾ ಮೂರು ವರ್ಷಗಳ ಹಿಂದೆ ತಮ್ಮ ರೇಡಿಯೋ ಜಾಕಿ ಹುದ್ದೆಗೆ ರಾಜೀನಾಮೆ ನೀಡಿದ್ರು. ಕೆಲಸ ಬಿಟ್ಟ ಬಳಿಕ ಮನೆಯಲ್ಲಿ ಒಬ್ಬರೇ ಇದ್ದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಡಿಪ್ರೆಷನ್‌, ಸ್ಟ್ರೆಸ್‌ನಿಂದಾಗಿ ಹಾರ್ಟ್‌ ಅಟ್ಯಾಕ್‌ ಆಗಿರಬಹುದೆಂದು ಹೇಳಲಾಗ್ತಿದೆ.
ಒಂದು ಘಟನೆ ಮಾಸುವ ಮುನ್ನವೇ ಹಲವಾರು ದುರಂತ ವಿಚಾರಗಳು ಮರುಕಳಿಸುತ್ತಲೇ ಇವೆ ಎಂಬುದು ದುಃಖದ ಸಂಗತಿ.

Share Post