Bengaluru

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಕೊರೊನಾ ಸೋಂಕು: ಮಣಿಪಾಲ್‌ಗೆ ದಾಖಲು

ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜನತಅದಳ ಪಕ್ಷದ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರಿಗೆ ಕೊರೊನಾ ಸೋಂಕು ತಗುಲಿದೆ. ದೇವೇಗೌಡರಿಗೆ ಕೋವಿಡ್‌ ಎರಡನೇ ಅಲೆಯಲ್ಲೂ ಸೋಂಕು ವಕ್ಕರಿಸಿತ್ತು. ಈಗ ಮೂರನೇ ಅಲೆಯಲ್ಲೂ ಮಹಾಮಾರಿ ತಗುಲಿದೆ. ಸದ್ಯ ಮಣಿಪಾಲ್‌ ಆಸ್ಪತ್ರೆಯಲ್ಲಿ ದೇಬೇಗೌಡರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ಕೆಮ್ಮು ಇದ್ದ ಕಾರಣ ಪರೀಕ್ಷೆಗೆ ಒಳಗಾಗಿದ್ದಾರೆ. ಈ ವೇಳೆ ಸೋಂಕು ತಗುಲಿರುವುದು ತಿಳಿದಿದೆ. ಕೂಡಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಬರಿ ಪಡಬೇಕಾದ ಅನಿವಾರ್ಯತೆ ಇಲ್ಲ. ಅವರ ಆರೋಗ್ಯ ಸ್ಥಿರವಾಗಿದೆ. ಗಂಭೀರ ರೋಗಲಕ್ಷಣಗಳಿಲ್ಲ ಅವರು ಆರೋಗ್ಯವಾಗಿದ್ದಾರೆ ಎಂದು ದೇವೇಗೌಡರ ಆಪ್ತ ಕಾರ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್‌ಡಿಡಿಗೆ ಕೊರೊನಾ ಎಂದು ತಿಳಿಯುತ್ತಿದ್ದಂತೆ, ಸಿಎಂ ಬಸವರಾಜ್‌ ಬೊಮ್ಮಾಯಿಯವರು ಮಾತನಾಡಿ ದೇವೇಗೌಡರ ಕುಟುಂಬ ಹಅಗೂ ಮಣಿಪಾಲ್‌ ಆಸ್ಪತ್ರೆಯ ವೈದ್ಯರೊಂದಿಗೆ ಮಾತನಾಡುತ್ತೇನೆ. ಇಳಿವಯಸ್ಸಲ್ಲೂ ಅವರು ಆರೋಗ್ಯವಾಗಿದ್ದಾರೆ ಆತಂಕ ಪಡುವ ಅಗತ್ಯವಿಲ್ಲ ಎಂದರು.

Share Post