National

ಮುಂಬೈ ಕಟ್ಟಡದಲ್ಲಿ ಅಗ್ನಿ ಅವಘಡ, ಏಳು ಸಾವು

ಮುಂಬೈ : ಮುಂಬೈನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ತಾಡ್‌ದೇವ್‌ ಪ್ರದೇಶದ ಭಾಟಿಯಾ ಆಸ್ಪತ್ರೆ ಸಮೀಪದ 20 ಮಹಡಿ ಕಟ್ಟಡದಲ್ಲಿ ಶನಿವಾರ ಮುಂಜಾನೆ ಭಾರಿ ಅಗ್ನಿ ದುರಂತ ಸಂಭವಿಸಿದೆ. ಅಗ್ನಿ ಅವಘಡದಿಂದ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

13 ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕೆಲಸ ನಡೆದಿದೆ. 5 ಆಂಬುಲೆನ್ಸ್‌ಗಳನ್ನು ಸ್ಥಳದಲ್ಲಿ ಇವೆ. ಅವಘಡದಲ್ಲಿ ಗಾಯಾಳುಗಳಾದವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.  ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಿದೆ.

Share Post