ಬಿಬಿಎಂಪಿಯ ಏಳು ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್
ಬೆಂಗಳೂರು; ಕಸ ವಿಲೇವಾರಿ ಟೆಂಡರ್ ನಲ್ಲಿ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು 15 ದಿನಗಳಲ್ಲಿ ಉತ್ತರಿಸುವಂತೆ ಬಿಬಿಎಂಪಿ ಏಳು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಬರೊಬ್ಬರಿ 222.29 ಕೋಟಿ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿದೆ.ಕಳೆದ ವರ್ಷ ಸೆಪ್ಟಂಬರ್ ನಲ್ಲಿ ನಡೆದಿದ್ದ ಟೆಂಡರ್ ನಲ್ಲಿ 45 ಕೋಟಿಯಲ್ಲಿ ಆಗೊ ಕೆಲಸಕ್ಕೆ 267 ಕೋಟಿ ಟೆಂಡರ್ ಕೊಟ್ಟಿದ್ದಾರೆ. ಪರಿಶುದ್ಧಿ ವೆಂಚರ್ಸ್ ಎಂಬ ಕಂಪನಿಗೆ ತಾಂತ್ರಿಕ ಅರ್ಹತೆ ಇಲ್ಲದಿದ್ದರು ಟೆಂಡರ್ ನೀಡಲಾಗಿದೆ ಎನ್ನಲಾಗುತ್ತಿದೆ. ಅಲ್ಲದೆ ಟೆಕ್ನಿಕಲ್ ಗೈಡ್ ಲೈನ್ಸ್ ನ ಕಮಿಟಿ ಮುಂದೆ ಮಂಡಿಸದೇ ಹಾಗೂ ಮಾಲೀನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯದೇ ಟೆಂಡರ್ ಗೆ ಅನುಮತಿ ನೀಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಯುಕ್ತ ರಾಕೇಶ್ ಸಿಂಗ್, ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ.ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ.ಹರೀಶ್ ನಾಯಕ್, ವಿಶೇಷ ಆಯುಕ್ತ, ಘನ ತ್ಯಾಜ್ಯ ನಿರ್ವಹಣೆ.ಬಸವರಾಜ್ ಆರ್ ಕಬಾಡ, ಅಧೀಕ್ಷಕ ಅಭ್ಯಂತರ, ಘನತ್ಯಾಜ್ಯ ನಿರ್ವಹಣೆ.ಪ್ರವೀಣ್ ಲಿಂಗಯ್ಯ, ಕಾರ್ಯಪಾಲಕ ಅಭಿಯಂತರ, ಘನತ್ಯಾಜ್ಯ ನಿರ್ವಹಣೆ.ಮಧುರಾಮಕೃಷ್ಣ, ಕಾರ್ಯಪಾಲಕ ಅಭಿಯಂತರ, ಘನತ್ಯಾಜ್ಯ ನಿರ್ವಹಣೆ.ಮೇಘ ಹೆಚ್.ಎಸ್, ಸಹಾಯಕ ಕಾರ್ಯಪಾಲಕ ಅಭಿಯಂತರ, ಘನತ್ಯಾಜ್ಯ ನಿರ್ವಹಣೆ. ಇವರಿಗೆ ನೋಟೀಸ್ ನೀಡಿದೆ.
ಬಿಬಿಎಂಪಿ ಗಾರ್ಬೇಜ್ ಟೆಂಡರ್ ನಲ್ಲಿ ಅವ್ಯವಹಾರ ಆರೋಪ ಪ್ರಕರಣ.ಟೆಂಡರ್ ಪ್ರಕ್ರಿಯೆಯಲ್ಲಿ 200 ಕೋಟಿಗೂ ಅಧಿಕ ಗೋಲ್ಮಾಲ್ ಮಾಡಲಾಗಿದೆ.ಈ ಬಗ್ಗೆ ಲೋಕಾಯುಕ್ತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ, FIR ದಾಖಲಿಸದೆ ಕೇವಲ ನೋಟಿಸ್ ನೀಡಿದೆ ಎಂದು. ಲೋಕಾಯುಕ್ತ ವಿರುದ್ದ ಹೈಕೋರ್ಟ್ ವಕೀಲ ಪ್ರಶಾಂತ್ ಮೆಥಲ್ ಹೇಳಿದ್ದಾರೆ.ಇನ್ನು ಈ ಪ್ರಕರಣವನ್ನ ಸಿಬಿಐ ತನಿಖೆ ಕೈಗೊಂಡಲ್ಲಿ ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಲಿದೆ.ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕಿದೆ.ಲೋಪಗಳ ದೋಷಗಳ ಸರಿಪಡಿಸಿಕೊಳ್ಳಲು ನೋಟೀಸ್ ನೀಡಿ 15 ದಿನಗಳ ಕಾಲ ಸಮಯವಕಾಶ ನೀಡಿರುವುದಾಗಿ ಸಂಶಯ ಮೂಡಿಸಿದೆ ಎಂದು ವಕೀಲರು ಗಂಬೀರ ಆರೋಪ ಮಾಡಿದ್ದಾರೆ.