Cinema

ನಿಖಿಲ್‌ ಕುಮಾರಸ್ವಾಮಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ

ಬೆಂಗಳೂರು : ಇಂದು ನಿಖಿಲ್‌ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಮತ್ತು ಸಿನಿಮಾ ರಂಗದಲ್ಲಿಯೂ ಸಕ್ರಿಯರಾಗಿರುವ ನಿಖಿಲ್‌ ಅವರಿಗೆ ಶುಭಾಷಯಗಳ ಮಹಾಪೂರವೇ ಹರಿದುಯ ಬರುತ್ತಿದೆ. ಇಂದು ಅವರ ಹೊಸ ಸಿನಿಮಾದ ಟೈಟಲ್‌ ರಿವೀಲ್‌ ಅಗಲಿದೆ.

ಹೆಸರಿಡದ ಸಿನಿಮಾದಲ್ಲಿ ಈಗಾಗಲೇ ನಟಿಸಲು ಶುರು ಮಾಡಿರುವ ನಿಖಿಲ್‌ ಅವರು ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹುಟ್ಟು ಹಬ್ಬದ ದಿನ ಅಭಿಮಾನಿಗಳನ್ನು ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಕೋವಿಡ್‌ ಹೆಚ್ಚಳದ ಕಾರಣ ನಿಖಿಲ್‌ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಮಂಜು ಅಥರ್ವ ಅವರು ನಿರ್ದೇಶನ ಮಾಡುತ್ತಿರುವ ನಿಖಿಲ್‌ ಅವರ ಹೊಸ ಸಿನಿಮಾದ ಟೈಟಲ್‌ ಅನ್ನು ಇಂದು ಚಿತ್ರತಂಡ ಬಿಡುಗಡೆ ಮಾಡಲಿದೆ.

Share Post