BengaluruCrime

ಕಬ್ಬನ್‌ ಪಾರ್ಕ್‌ನಲ್ಲಿ ನಡೀತು ಅತ್ಯಾಚಾರ; ಮೂರು ದಿನದ ನಂತರ ದೂರು ದಾಖಲು

ಬೆಂಗಳೂರು; ದೂರದ ಸಂಬಂಧಿಯೊಬ್ಬ ಕಬ್ಬನ್‌ ಪಾರ್ಕ್‌ನಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ರಮೇಶ್‌ ಎಂಬ ದೂರದ ಸಂಬಂಧಿಯೇ ಆರೋಪಿ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. 

 ಆಗಸ್ಟ್‌ ಆರರಂದು ರಮೇಶ್‌ ಬೆಂಗಳೂರಿಗೆ ಬಂದಿದ್ದ. ಭೇಟಿ ಮಾಡಬೇಕೆಂದು ಹೇಳಿದ್ದ. ದೂರದ ಸಂಬಂಧಿ ಅಪರೂಪಕ್ಕೆ ಬೆಂಗಳೂರಿಗೆ ಬಂದಿದ್ದಾನೆ ಎಂದು ಅವನು ಹೇಳಿದಂತೆ ನಾನು ಕಬ್ಬನ್‌ ಪಾರ್ಕ್‌ಗೆ ತೆರಳಿದ್ದೆ. ಈ ಸಮಯವನ್ನು ದುರುಪಯೋಗಪಡಿಸಿಕೊಂಡ ರಮೇಶ್‌ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಇದರಿಂದ ನಾನು ಘಾತಕ್ಕೊಳಗಾಗಿದ್ದೆ. ಹೀಗಾಗಿ ದೂರು ನೀಡಲು ತಡವಾಗಿದೆ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಆರೋಪಿ ರಮೇಶ್‌ ಗಾಗಿ ಹುಡುಕಾಟ ಶುರು ಮಾಡಿದ್ದಾರೆ.

Share Post