ಅಬಕಾರಿ ಸುಂಕ ಶೇ.20ರಷ್ಟು ಹೆಚ್ಚಳ; ದುಬಾರಿಯಾಗಲಿದೆ ಮದ್ಯ
ಬೆಂಗಳೂರು; ಸಿದ್ದರಾಮಯ್ಯ ಮಂಡಿಸುತ್ತಿರುವ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದೆ. ಶೇಕಡಾ 20ರಷ್ಟು ಅಬಕಾರ ಸುಂಕವನ್ನು ಹೆಚ್ಚು ಮಾಡಲಾಗಿದೆ. ಇನ್ನು ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಕೂಡಾ ಶೇ.10ರಷ್ಟು ಹೆಚ್ಚಳ ಮಾಡಲಾಗಿದೆ.
18 ಘೋಷಿತ ಮದ್ಯದ ಬೆಲೆ ಸ್ಲಾಬ್‌ಗಳ ಮೇಲೆ ಅಬಕಾರಿ ಸುಂಕ ಹೆಚ್ಚಿಸಲಾಗಿದ್ದು, ಹಾಲಿ ಇರುವ ದರಗಳ ಮೇಲೆ ಶೇಕಡಾ 20ರಷ್ಟು ಹೆಚ್ಚಿಸಲಾಗಿದೆ. ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.175 ಇದ್ದುದನ್ನು ಶೇ.185ಕ್ಕೆ ಹೆಚ್ಚು ಮಾಡಲಾಗಿದೆ. ಅಬಕಾರಿ ಸುಂಕ ಹೆಚ್ಚಿದ ನಂತರವೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಮದ್ಯದ ಬೆಲೆ ಕಡಿಮೆ ಇರಲಿದೆ ಎಂದು ಸಿಎಂ ಹೇಳಿದ್ದಾರೆ. ಈ ಬಾರಿ ಅಬಕಾರಿ ತೆರಿಗೆಯಿಂದ ಸುಮಾರು 36 ಸಾವಿರ ಕೋಟಿ ರೂಪಾಯಿ ಸಂಗ್ರಹ ಗುರಿ ಹೊಂದಲಾಗಿದೆ.