BengaluruCrime

ಐಟಿ ದಾಳಿ ವೇಳೆ ಜುವೆಲರಿ ಮಾಲೀಕನ ಮನೆಯಲ್ಲಿ ಅಪ್ರಾಪ್ತ ಬಾಲಕಿಯರ ಪತ್ತೆ!

ಬೆಂಗಳೂರು; ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಬೆಂಗಳೂರಿನ ಜಯನಗರದ ಜುವೆಲರಿ ಅಂಗಡಿಗಳು ಹಾಗೂ ಮಾಲೀಕರ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಭಾರೀ ಪ್ರಮಾಣದ ತೆರಿಗೆ ವಂಚನೆ ನಡೆದಿರುವುದು ಬೆಳಕಿಗೆ ಬಂದಿತ್ತು. ಆದ್ರೆ ಇದರ ನಡುವೆ, ಜುವೆಲರಿ ಅಂಗಡಿ ಮಾಲೀಕನೊಬ್ಬನ ಮನೆಯಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಕೂಡಾ ಪತ್ತೆಯಾಗಿದ್ದಾರೆ. ಈ ಬಗ್ಗೆ ಕೂಡಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

ಯಡಿಯೂರಿನ ಸಾಕಮ್ಮ ಗಾರ್ಡನ್ ನಲ್ಲಿರುವ ಗೌರವ್ ಚೋರ್ಡಿಯಾ ಎಂಬ ಚಿನ್ನದ ಅಂಗಡಿ ಮಾಲೀಕನ ಮನೆಯಲ್ಲಿ ಶೋಧ ನಡೆಸುವಾಗ ಹೆಣ್ಣು ಮಕ್ಕಳು ಸಿಕ್ಕಿದ್ದಾರೆ. 10 ಮತ್ತು 8 ವರ್ಷದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಆ ಮನೆಯಲ್ಲಿ ಕಂಡುಬಂದಿದ್ದಾರೆ. ಇವರು ಬಿಹಾರದ ಗಾಯಾ ಮೂಲದ ಹೆಣ್ಣು ಮಕ್ಕಳು ಎಂದು ತಿಳಿದುಬಂದಿದೆ. ಈ ಇಬ್ಬರು ಮಕ್ಕಳನ್ನು ಮನೆಯ ಒಡತಿ ಪಿಂಕಿ ಜೈನ್‌ ಆರೈಕೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿದುಬಂದಿದೆ. ಸದ್ಯ ಇಬ್ಬರೂ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

ಕಾನೂನು ಬಾಹಿರವಾಗಿ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮನೆಯಲ್ಲಿಟ್ಟುಕೊಂಡ ಕಾರಣಕ್ಕಾಗಿ ಜಯನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲು ಮಾಡಲಾಗಿದೆ. ಅಶೋಕ್ ಕುಮಾರ್, ಶ್ರೇಯಸ್ ಚೌಡರೆ, ಗೌರವ್ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಮಕ್ಕಳನ್ನು ಸಿದ್ದಾಪುರ ಬಾಲರಕ್ಷಣಾ ಕೇಂದ್ರದಲ್ಲಿರಿಸಲಾಗಿದೆ.

ಐದು ದಿನಗಳಿಂದ ಜಯನಗರದ 9 ಜುವೆಲರಿ ಅಂಗಡಿಗಳು ಹಾಗೂ ಅವುಗಳ ಮಾಲೀಕರು ಹಾಗೂ ಸಂಬಂಧಿಗಳ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.

 

Share Post