ಡಿಎಂಕೆ ಕಾರ್ಯಕರ್ತ ಗುರುಸ್ವಾಮಿ ಮೇಲೆ ಮಾರಣಾಂತಿಕ ದಾಳಿ; ಪೊಲೀಸರ ಮೂರು ತಂಡ ರಚನೆ
ಬೆಂಗಳೂರು; ಡಿಎಂಕೆ ನಾಯಕ ಎಂಕೆ ಅಳಗಿರಿಯ ಆಪ್ತ ಮಧುರೈನ ವಿ.ಕೆ.ಗುರುಸ್ವಾಮಿ ಮೂರ್ತಿ ಮೇಲೆ ನಿನ್ನೆ ಐದು ನಟೋರಿಯಸ್ ರೌಡಿಗಳ ಗುಂಪು ದಾಳಿ ಮಾಡಿತ್ತು. ಹೋಟೆಲ್‌ನಲ್ಲಿದ್ದಾಗ ದುಷ್ಕರ್ಮಿಗಳು ಆಗಮಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈಗ ಆರೋಪಿಗಳಾಗಿ ಪೊಲೀಶರು ತೀವ್ರ ತಲಾಶ್ ನಡೆಸಿದ್ದಾರೆ. ಮೂರು ತನಿಖಾ ತಂಡಗಳನ್ನು ರಚಿಸಲಾಗಿದ್ದು, ಬೆಂಗಳೂರಿನ ವಿವಿಧೆಡೆ ಹುಡುಕಾಟ ನಡೆಸಲಾಗುತ್ತಿದೆ. ಸಿಸಿಟಿವಿಯ ದೃಶ್ಯಾವಳಿ ಹಾಗೂ ಮೊಬೈಲ್ ಟವರ್ ಡಂಪ್ ಲಿಸ್ಟ್ ಪಡೆದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಆರೋಪಿಗಳು ಬೆಂಗಳೂರಿನಲ್ಲೇ ಇದ್ದಾರೆಂದು ಶಂಕಿಸಲಾಗಿದ್ದು, ಅವರು ಎಲ್ಲಿ ಅಡಗಿದ್ದಾರೆ ಎಂಬುದರ ಬಗ್ಗೆ ಹುಡುಕಾಟ ನಡೆಯುತ್ತಿದೆ.
ಮಧುರೈನ ಗುರುಸ್ವಾಮಿಯವರು, ಕಾನೂನು ಸಮಸ್ಯೆ ಇರುವ ಸೈಟ್ ವಿಚಾರವಾಗಿ ಮಾತುಕತೆ ಮಾಡಲೆಂದು ಬೆಂಗಳೂರಿಗೆ ಬಂದಿದ್ದರು. ಭಾನುವಾರ ಬಂದಿದ್ದ ಅವರು ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿದ್ದರು. ಬಾಣಸವಾಡಿಯ ಸುಖ್‌ಸಾಗರ್ ಹೋಟೆಲ್‌ನಲ್ಲಿ ಬ್ರೋಕರ್ ಜೊತೆ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ತಮಿಳುನಾಡು ರಿಜಿಸ್ಟ್ರೇಷನ್ ಕಾರಿನಲ್ಲಿ ಬಂದ 5 ಜನರು ಏಕಾಏಕಿ ಗುರುಸ್ವಾಮಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.
ಗುರುಸ್ವಾಮಿ ಕೂಡಾ ತನ್ನ 20ನೇ ವಯಸ್ಸಿನಿಂದಲೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅನಂತರ ಜೀವಬೆದರಿಕೆ ಇದ್ದಿದ್ದರಿಂದ ಎಲ್ಲಿಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಮಧುರೈನಲ್ಲಿ ಸಾಕಷ್ಟು ದ್ವೇಷ ಕಟ್ಟಿಕೊಂಡಿದ್ದ ಗುರುಸ್ವಾಮಿ ಬೆಂಗಳೂರಿಗೆ ಬರುವುದನ್ನು ತಿಳಿದು, ದಾಳಿ ನಡೆಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಗುರುಸ್ವಾಮಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೊಂದೆಡೆ ನಿನ್ನೆ ಘಟನೆಯಿಂದ ಸುಖಸಾಗರ್ ಹೋಟೆಲ್‌ನಲ್ಲಿ ರಕ್ತ ಚೆಲ್ಲಾಡಿತ್ತು. ಇಂದು ಅದನ್ನು ಸ್ವಚ್ಛಗೊಳಿಸಿ ಹೋಟೆಲ್‌ನಲ್ಲಿ ಹೋಮಹವನ ನಡೆಸಲಾಗುತ್ತಿದೆ.