BengaluruPolitics

5 ಗ್ಯಾರೆಂಟಿ ಜಾರಿ ಮಾಡಲು ರಾಜ್ಯದ ಬೊಕ್ಕಸ ತುಂಬಿಸಲು ಸರ್ಕಸ್‌

ಬೆಂಗಳೂರು; ರಾಜ್ಯ ಸರ್ಕಾರ ಐದು ಗ್ಯಾರೆಂಟಿಗಳನ್ನು ಜಾರಿ ಮಾಡಲು ಮುಂದಾಗಿದೆ. ಆದ್ರೆ ಈ ಐದು ಗ್ಯಾರೆಂಟಿಗಳಿಗೆ ಕನಿಷ್ಠ ವರ್ಷಕ್ಕೆ 60 ಸಾವಿರ ಕೋಟಿ ರೂಪಾಯಿ ಬೇಕಾಗಿದೆ. ಇಷ್ಟು ಮೊತ್ತದ ಹಣವನ್ನ ಸಂಗ್ರಹಿಸುವುದು ಸರ್ಕಾರಕ್ಕೆ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಆದಾಯದ ಮೂಲಗಳನ್ನು ಹುಡುಕುತ್ತಿದೆ. ಯಾವ ಯಾವ ಕ್ಷೇತ್ರದಿಂದ ಸರ್ಕಾರಕ್ಕೆ ಬರುವ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ಹಾಕುತ್ತಿದೆ.

ಸರ್ಕಾರ ಪ್ರಮುಖವಾಗಿ ಕಂದಾಯ ಇಲಾಖೆಯನ್ನು ನೆಚ್ಚಿಕೊಂಡಿದೆ. ನೋಂದಣಿ, ಸ್ಟ್ಯಾಂಪ್​ ಡ್ಯೂಟಿ ಹೆಚ್ಚಳ ಮಾಡುವ ಕುರಿತಂತೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಇನ್ನು ಆಸ್ತಿಗಳ ಗೈಡ್ಲೆ‌ನ್ಸ್ ವಾಲ್ಯೂವ್ ಹೆಚ್ಚಳ, ಕಂದಾಯ, ಅಬಕಾರಿ, ನೋಂದಣಿ ಇಲಾಖೆಯಲ್ಲಿ ಹಣ ಸೋರಿಕೆ ತಡೆಯಲು ಕ್ರಮ ವಹಿಸಲು ಮುಂದಾಗಿದೆ. ಅಕ್ರಮ ಸಕ್ರಮಕ್ಕೂ ಸರ್ಕಾರ ಮುಂದಾಗಲಿದೆ ಎಂದು ಹೇಳಲಾಗುತ್ತಿದೆ.

 

Share Post