BengaluruDistricts

ವೀಕೆಂಡ್‌ ಕರ್ಫ್ಯೂ, ನೈಟ್‌ ಕರ್ಫ್ಯೂ : ನಾಳೆ ಮಧ್ಯಾಹ್ನ 1ಗಂಟೆಗೆ ಸಿಎಂ ಮಹತ್ವದ ಸಭೆ

ಬೆಂಗಳೂರು : ಕೊರೊನಾ ಕಾರಣದಿಂದ ರಾಜ್ಯದಲ್ಲಿ ಜಾರಿ ಮಾಡಿರುವ ವೀಕೆಂಡ್‌ ಕರ್ಫ್ಯೂ ಮತ್ತು ನೈಟ್‌ ಕರ್ಫ್ಯೂ ನಂತಹ ಕಠಿಣ ನಿಯಮಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಸಾಕಷ್ಟು ಸಂಘ, ಸಂಸ್ಥೆ, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಕುರಿತು ನಾಳೆ ಸಿಎಂ ಚರ್ಚಿಸಲಿದ್ದಾರೆ.

ತಮ್ಮ ಪಕ್ಷದವರೇ ವೀಕೆಂಡ್‌ ಮತ್ತು ನೈಟ್‌ ಕರ್ಫ್ಯೂ ವಿರುದ್ಧ ಕೊಂಕು ಆಡುತ್ತಿರುವುದು ಸಿಎಂ ಅವರಿಗೆ ತೀವ್ರ ಬೇಸರವನ್ನುಂಟು ಮಾಡಿದೆ. ನಾಳೆ ಮಹತ್ವದ ಸಭೆ ನಿಗದಿಯಾಗಿದ್ದು ಕರ್ಫ್ಯೂಗಳ ಭವಿಷ್ಯ ತಿಳಿಯಲಿದೆ.

ಸಿಎಂ ನೇತೃತ್ವದ ಕೊರೊನಾ ಸಭೆಗೆ ಸಮಯ ನಿಗದಿಯಾಗಿದೆ. ನಾಳೆ ಮಧ್ಯಾಹ್ನ 1ಗಂಟೆಗೆ ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ನೇತೃತ್ವದ ತಂಡ ಸಭೆ ಮಾಡಲಿದೆ. ಮಧ್ಯಾಹ್ನ 2.30ರ ಒಳಗೆ ವೀಕೆಂಡ್‌ ಮತ್ತು ನೈಟ್‌ ಕರ್ಫ್ಯೂವಿನ ಭವಿಷ್ಯ ತಿಳಿಯಲಿದೆ.

ಕೇಸ್‌ಗಳು ಹೆಚ್ಚುತ್ತಿರುವುದಕ್ಕೆ ಸರ್ಕಾರ ಕರ್ಫ್ಯೂ ಬಿಟ್ಟು ಪರ್ಯಾಯ ಮಾರ್ಗವನ್ನೇನಾದರೂ ಹುಡುಕುತ್ತಾ ಎಂದು ಕಾದು ನೋಡಬೇಕಿದೆ. ಈಗಾಗಲೇ ಸಾರ್ವಜನಿಕರು ಕರ್ಫ್ಯೂ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ.

ವೀಕೆಂಡ್‌ಗಳು ಕೂಡ ವಾಣಿಜ್ಯ ಚಟುವಟಿಕೆಗೆ 50-50 ನಿಯಮಾನುಸಾರ ಅವಕಾಶ ನೀಡಲು ಸಿಎಂ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಇನ್ನು ನೈಟ್‌ ಕರ್ಫ್ಯೂ ಸಮಯವನ್ನು ಕಡಿತಗೊಳಿಸಬಹುದು ಎಂದು ಅಂದಾಜಿಸಲಾಗಿದೆ.

ನಾಳೆ ನಡೆಯುವ ಸಿಎಂ ಸಭೆ ಮಹತ್ವ ಪಡೆದುಕೊಂಡಿದ್ದು, ಎಲ್ಲರೂ ಇದಕ್ಕಾಗಿ ಕಾಯ್ದಿದ್ದಾರೆ.

Share Post