ಸಿಎಂ ವಿಚಾರದ ಬಗ್ಗೆ ಮತ್ತೆ ಕಾಂಗ್ರೆಸ್ ಟ್ವೀಟ್; ಕೈ ನಾಯಕರು ಮಾತ್ರ ಫುಲ್ ಸೈಲೆಂಟ್
ಬೆಂಗಳೂರು; ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ ಎಂದು ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಆದ್ರೆ, ಕಾಂಗ್ರೆಸ್ ನಾಯಕರು ಈ ಬಗ್ಗೆ ಸೈಲೆಂಟಾಗಿದ್ದಾರೆ. ಸಿದ್ದರಾಮಯ್ಯ ಅವರು ಆ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಹೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಆಗಸ್ಟ್ 15ರ ನಂತರ ಮಾತಾಡೋಣ ಎಂದು ಹೇಳುತ್ತಿದ್ದಾರೆ. ಈ ನಡುವೆಯೇ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಯಿಂದ ಒಂದಷ್ಟು ಸರಣಿ ಟ್ವೀಟ್‌ಗಳನ್ನು ಮಾಡಲಾಗಿದೆ. ಆ ಟ್ವೀಟ್‌ಗಳ ವಿವರ ಇಲ್ಲಿದೆ.
ಟ್ವೀಟ್-೧
ಬಿಜೆಪಿ ಹೈಕಮಾಂಡಿಗೆ ಕರ್ನಾಟಕದ ಸಿಎಂಗಳೆಂದರೆ #PuppetCM ಇದ್ದಹಾಗೆ, ಅಡಿಸಿಯೂ ನೋಡುತ್ತಾರೆ, ಬೀಳಿಸಿಯೂ ನೋಡುತ್ತಾರೆ! @BSYBJP ಅವರಂತಹ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳಿಸಿರುವಾಗ ಬೋಂಬೆ @BSBommai ಅವರು ಯಾವ ಲೆಕ್ಕ! ‘ಸಂತೋಷ ಕೂಟ’ಕ್ಕೆ ಸಂತೋಷಪಡಿಸುವ ಬೊಮ್ಮಾಯಿಯವರ ಪ್ರಯತ್ನ ವಿಫಲವಾಗಿದೆ. ಹಗರಣ & ವೈಫಲ್ಯಗಳ ಕೊಡ ತುಂಬಿದೆ.
ಟ್ವೀಟ್-೨
@BSYBJP ಅವರನ್ನು ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲೇ ಕಣ್ಣೀರು ಹಾಕಿಸಿ ಕಳಿಸಲಾಗಿತ್ತು. ಈಗ @BSBommai ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸುವ ವೇದಿಕೆ ಸಜ್ಜಾಗುತ್ತಿದೆ. 1 ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸ ಕೈಗೊಂಡರೂ #PuppetCM ಗೆ ಸಂಪುಟ ಸಂಕಟ ಬಗೆಹರಿಸಲಾಗದ್ದೇ ಇದಕ್ಕೆ ಸಾಕ್ಷಿ!
ಟ್ವೀಟ್-೩
ಭಾರತದ ಸ್ವಾತಂತ್ರ ಹೋರಾಟದ ಪ್ರಮುಖ ಘಟ್ಟವಾದ ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿತ್ತು ಸಂಘಪರಿವಾರ. ನಿನ್ನೆ ‘ಕ್ವಿಟ್ ಇಂಡಿಯಾ ದಿನ’ವನ್ನು ಆಚರಿಸದೆ BJP4Karnataka ಕೂಡ ತನ್ನೊಳಗಿದ್ದ ದೇಶವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಗಾಂಧಿ ಕೊಲೆ ಎಂದರೆ ಭಾರತದ ಕೊಲೆ ಮಾಡಿದಂತೆ. ಭಾರತದ ಕೊಲೆಗಡುಕರು- ಬಿಜೆಪಿ. #ದೇಶವಿರೋಧಿಬಿಜೆಪಿ
ಇನ್ನು ಬಿಜೆಪಿ ಸಿಎಂ ಬದಲಾವಣೆ ವಿಚಾರದ ಟ್ವೀಟ್‌ಗಳನ್ನು ಯಾರು ಮಾಡಿದ್ದು..? ಅದಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಕೆಪಿಸಿಸಿಯಿಂದ ಸಾಮಾಜಿಕ ಜಾಲತಾಣ ವಿಭಾಗಕ್ಕೆ ವರದಿ ಕೊಡುವಂತೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.