Bengaluru

ಕರೋನಾ ಬ್ಯಾಚ್‌ ವಿದ್ಯಾರ್ಥಿಗಳಿಗಾಗಿ ಪಿಯುಸಿ ಪ್ರಶ್ನೆಪತ್ರಿಕೆ ಬದಲಾವಣೆ..?

ಬೆಂಗಳೂರು; ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಮಾದರಿಯಲ್ಲಿ ಬದಲಾವಣೆಮಾಡಲಾಗಿದೆ.ಪಿಯು ಬೋರ್ಡ್ ಮಕ್ಕಳು ಪಾಸ್ ಆಗಲು ಬೇಕಾದಷ್ಟು ಸುಲಭ ಪ್ರಶ್ನೆಪತ್ರಿಕೆ ರೂಪಿಸಲು ತಯಾರಿ ನಡೆಸಿದೆ.ಈ ಶೈಕ್ಷಣಿಕ ವರ್ಷದಿಂದಲೇ ಹೊಸ ಪ್ರಶ್ನೆಪತ್ರಿಕೆ ಅನುಷ್ಟಾನ ತರಲು ಪಿಯು ಬೋರ್ಡ್ ನಿದ೯ರಿಸಿದೆ ಎಂದು ಮೂಲಗಳು ತಿಳಿಸಿವೆ.ಇದೇ ಮಾರ್ಚ್ 9ರಿಂದ 29ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗುವುದು.

ಈ ಮೊದಲು ಪ್ರತಿ ಪ್ರಶ್ನೆಗೂ ವಿದ್ಯಾರ್ಥಿಗಳು ಪ್ರಭಂದ ರೀತಿಯಲ್ಲಿ ಉತ್ತರಗಳನ್ನು ಬರೆಯಬೇಕಾಗಿತ್ತು ಆದರೆ ಈ ಬಾರಿ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆಯಲ್ಲಿ ಒಂದು ಅಂಕದ ಪ್ರಶ್ನೆಗಳು ಇರಲಿವೆ.ಎಸ್ ಎಸ್ ಎಲ್ ಸಿ ಕೊರೊನಾ ಬ್ಯಾಚ್ ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆಯೆಂದು ಎನ್ನಲಾಗುತ್ತಿದೆ.

ಒಟ್ಟು 20 ಅಂಕದ ಬಹು ಆಯ್ಕೆ ಹಾಗೂ ಖಾಲಿ ಬಿಟ್ಟ ಸ್ಥಳ ಪ್ರಶ್ನೆಗಳನ್ನ ರೂಪಿಸಲಿದೆ ಪಿಯು ಬೋರ್ಡ್.ಈ ಬಾರಿಯ ಪ್ರಶ್ನೆಪತ್ರಿಕೆ ಯಲ್ಲಿ ಬಹು ಆಯ್ಕೆಯ 15 ಅಂಕದ ಹಾಗು 5 ಅಂಕದ ಖಾಲಿ ಬಿಟ್ಟ ಸ್ಥಳ ತುಂಬಿಸಿ ಪ್ರಶ್ನೆಗಳನ್ನ ಪ್ರಶ್ನೆ ಪತ್ರಿಕೆಯಲ್ಲಿ ಅಳವಡಿಸಲಾಗುವುದು.ಕಲಾ,ವಾಣಿಜ್ಯ,ವಿಜ್ಞಾನ ಪಿಯು ಪ್ರಶ್ನೆಪತ್ರಿಕೆಯಲ್ಲಿ ಬದಲಾವಣೆ ಮಾಡಲಾಗುವುದು.ಕರೂನಾ ಕಾರಣಕ್ಕಾಗಿ ಕಳೆದೆರಡು ವರ್ಷದ ಹಿಂದೆ SSLC ಪರೀಕ್ಷೆ ಬರೆಯದೇ ಪಾಸ್ ಆಗಿದ್ದ ವಿದ್ಯಾರ್ಥಿಗಳೇ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ.ಹಾಗಾಗಿ ಇದನ್ನ ಗಮನದಲ್ಲಿ ಎಟ್ಟು ಕೊಂಡು ಪಿಯು ಬೋರ್ಡ್ ಈ ವಿದ್ಯಾರ್ಥಿಗಳು ಫೇಲಾಗಲು ತೊಂದರೆಯಾಗದಂತೆ ಪ್ರಶ್ನೆಪತ್ರಿಕೆ ರೂಪಿಸಲಾಗಿದೆ ಎನ್ನಲಾಗುತ್ತಿದೆ.

Share Post