ನಿವೃತ್ತಿ ಐಪಿಎಸ್ ಅಧಿಕಾರಿ ಪುತ್ರಿ ಐಎಎಸ್ ಅಧಿಕಾರಿ ಪತಿ ವಿರುದ್ಧ ಕೇಸ್
ಬೆಂಗಳೂರು; ನಿವೃತ್ತಿ ಐಎಎಸ್ ಅಧಿಕಾರಿ ಪುತ್ರಿ ತನ್ನ ಐಎಎಸ್ ಅಧಿಕಾರಿ ಪತಿಯ ವಿರುದ್ಧ ದೂರು ಕೊಟ್ಟಿದ್ದಾರೆ. ಇದರಿಂದ ಐಎಎಸ್ ಅಧಿಕಾರಿಯ ಕೌಟುಂಬಿಕ ಕಲಹ ಬೀದಿಗೆ ಬಿದ್ದಿದೆ. ಐಎಎಸ್ ಅಧಿಕಾರಿ ಆಕಾಶ ಶಂಕರ್ ವಿರುದ್ಧ ಪತ್ನಿ ಡಾ.ವಂದನಾ ಅವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಟ್ರಾಫಿಕಿಂಗ್ ಆಫ್ ಖಾಕೀಸ್ ಡಾಟರ್ ಹಾಗೂ ಟ್ರಾಫಿಕರ್ ಆಫ್ ಡಾಕ್ಟರ್ ವಂದನಾ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಡಾ.ವಂದನಾ ಆರೋಪ ಮಾಡುತ್ತಿದ್ದಾರೆ. ಪತಿ ಆಕಾಶ್ ಶಂಕರ್, ಅವರ ಸಹೋದರ ವಿಕಾಸ್ ಶಂಕರ್, ಅವರ ಪತ್ನಿ ಚೇತನಾ ವಿಕಾಸ್, ಐಸಿರಿ ಶಿವಕುಮಾರ್ ವಿರುದ್ಧವೂ ದೂರು ನೀಡಲಾಗಿದೆ.
ಈ ಹಿಂದೆ ಕೂಡಾ ಡಾ.ವಂದನಾ ಅವರು ಅತ್ತೆ ಚಂದ್ರಿಕಾ ಹಾಗೂ ಮಾವ ಶಂಕರ್ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು. ಪತಿ ಆಕಾಶ್ ಶಂಕರ್ ಬೇರೆ ಮಹಿಳೆ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು ಎಂಬ ಆರೋಪವನ್ನೂ ಮಾಡಿದ್ದರು. ಈ ಕಾರಣಕ್ಕಾಗಿ ನನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ವಂದನಾ ಆರೋಪ ಮಾಡಿದ್ದಾರೆ.