Districts

ಕುದುರೆಯೇರಿ ಬಂದು ಬಜೆಟ್ ಮಂಡಿಸಿದ ಅಧ್ಯಕ್ಷ

ಹಾವೇರಿ; ಪಟ್ಟಣ ಪಂಚಾಯತಿ ಅಧ್ಯಕ್ಷರೊಬ್ಬರು ಬಜೆಟ್ ಮಂಡನೆಗೆ ಕುದುರೆಯೇರಿ ಬಂದು ಜನರ ಹುಬ್ಬೇರುವಂತೆ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕರೂರು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಠಾಧರ ಕುದರೆಯೇರಿ ಬಂದು ಈ ಅಚ್ಚರಿಗೆ ಕಾರಣವಾಗಿದ್ದಾರೆ.

ಪಟ್ಟಣ ಪಂಚಾಯಿತಿ ಬಜೆಟ್ ನ್ನ ಸಭಾಭವನದಲ್ಲಿ 2023-24 ನೇ ವರ್ಷದ ಬಜೆಟ್ ಮಂಡನೆ ಸಭೆಯನ್ನ ಆಯೋಜಿಸಲಾಗಿತ್ತು.ಈ ವೇಳೆ ಅಧ್ಯಕ್ಷರು ಕುದುರೆಯೇರಿ ಬಂದು ಬಜೆಟ್ ಮಂಡನೆ ಮಾಡುವ ಮೂಲಕ ಜನರ ಗಮನ ಸೆಳೆದರು.

Share Post