BengaluruScienceTechTechnology

ಹೆಚ್ಚಿದ ಚಂದ್ರಯಾನ-3 ಕುತೂಹಲ; ಸಂಜೆ 6.04ಕ್ಕೆ ಸಾಫ್ಟ್‌ ಲ್ಯಾಂಡಿಂಗ್‌

ಬೆಂಗಳೂರು; ಇಂದು ಭಾರತದ ಪಾಲಿಗೆ ಮಹತ್ವದ ದಿನ. ಇಡೀ ಪ್ರಪಂಚವೇ ಭಾರತದತ್ತ ನೋಡುತ್ತಿದೆ. ಯಾಕಂದ್ರೆ ನಮ್ಮ ಇಸ್ರೋ ಕಳುಹಿಸಿರುವ ಚಂದ್ರಯಾನ-3 ಇಂದು ಚಂದ್ರನ ಮೇಲೆ ಇಳಿಯಲಿದೆ. ಇಂದು ಸಂಜೆ 6.04ಕ್ಕೆ ಸರಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲಿದೆ. ಕೊನೆಯ 15 ನಿಮಿಷಗಳು ಅತ್ಯಂತ ಪ್ರಮುಖವಾದುವು. ಸಾಫ್ಟ್‌ ಲ್ಯಾಂಡಿಂಗ್‌ಗಾಗಿ ಇಸ್ರೋ ವಿಜ್ಞಾನಿಗಳು ಸಕಲ ಕ್ರಮಗಳನ್ನೂ ಕೈಗೊಂಡಿದ್ದಾರೆ. 

ಪ್ರಗ್ಯಾನ್ ರೋವರ್ ಅನ್ನು ಹೊತ್ತ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿದ್ದು, ಸಂಜೆ 5.20 ಗಂಟೆಯಿಂದ ಲ್ಯಾಂಡಿಂಗ್‌ ಪ್ರಕ್ರಿಯೆ ಶುರುವಾಗಲಿದೆ.  ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಕೇಂದ್ರದ (ಇಸ್ರೋ) ಬಾಹುಬಲಿ ರಾಕೆಟ್ ಅಥವಾ ಉಡಾವಣಾ ವಾಹನ ಮಾರ್ಕ್-3, ಚಂದ್ರಯಾನ-3 ಅನ್ನು ಹೊತ್ತು ತಂದು ಕಕ್ಷೆಗೆ ಸೇರ್ಪಡೆ ಮಾಡಿತ್ತು. ಆಗಸ್ಟ್ 1ರಂದು ಚಂದ್ರನ ಕಡೆಗಿನ 3.84 ಲಕ್ಷ ಕಿಮೀ ಪ್ರಯಾಣ ಆರಂಭಿಸಿ, ಆಗಸ್ಟ್ 5ರಂದು ಚಂದ್ರಯಾನ ಉಪಗ್ರಹವು ಚಂದ್ರನ ಕಕ್ಷೆಗೆ ಪ್ರವೇಶಿಸಿತ್ತು.

Share Post